ಪುತ್ತೂರು: ರಾಜ್ಯಾದ್ಯಂತ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಭಾರೀ ಗೊಂದಲ ವ್ಯಕ್ತವಾಗುತ್ತಿದ್ದು, ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದೆ.
ಈ ಬಗ್ಗೆ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ರವರು ಮಾಹಿತಿ ನೀಡಿದ್ದು, ಯಾವುದೇ ಪಠ್ಯಗಳನ್ನು ತೆಗೆದಿಲ್ಲ, ಪಠ್ಯಗಳನ್ನು ಅದಲು-ಬದಲು ಮಾಡಲಾಗಿದೆ ಎಂದರು.
ಯಾವ ಪಠ್ಯ ಪುಸ್ತಕಗಳಲ್ಲಿ ಹೆಚ್ಚು ವಿಷಯಗಳಿದ್ದವೂ ಅವುಗಳಲ್ಲಿ ಕೆಲ ತಿದ್ದುಪಡಿ ಮಾಡಲಾಗಿದೆ. ತಜ್ಞರ ಸಲಹೆ ಪ್ರಕಾರ ಮಕ್ಕಳಿಗೆ ಜಾಸ್ತಿ ಹೊರೆಯಾಗದಂತೆ ಪಠ್ಯಗಳಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಎಲ್ಲಾ ವಿಷಯಗಳಲ್ಲೂ ರಾಜಕೀಯವನ್ನು ಮಾಡಲಾಗುತ್ತಿದೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿಯೂ ವಿಪಕ್ಷಗಳು ರಾಜಕೀಯವನ್ನು ಮಾಡುತ್ತಿದ್ದಾರೆ. ಅವರ ಪ್ರಕಾರ ಈ ಬಾರಿ ಶಿಕ್ಷಣ ಕ್ಷೇತ್ರ ಯಾವುದೇ ರೀತಿಯ ಬೆಳವಣಿಗೆಗಳು ಆಗಲು ಸಾಧ್ಯವಿಲ್ಲ ಎಂದು ತಿಳಿದಿದ್ದರು. ಆದರೇ ಈ ರೀತಿಯ ಉತ್ತಮ ಬೆಳವಣಿಗೆಗಳು ಆಗಿರುವುದನ್ನು ಸಹಿಸಲು ಸಾಧ್ಯವಾಗದೆ ಈ ರೀತಿಯ ಸುಳ್ಳು ಪ್ರಚಾರಗಳನ್ನು ಮಾಡಲಾಗುತ್ತಿದೆ ಎಂದರು.
ಇನ್ನೆರಡು ದಿನಗಳಲ್ಲಿ ಪಠ್ಯ ಪುಸ್ತಕಗಳ ಮುದ್ರಣ ಕಾರ್ಯ ಮುಗಿಯಲಿದೆ ಈ ವೇಳೆ ಸತ್ಯಾಂಶಗಳು ತಿಳಿಯಲಿದೆ ಎಂದು ಹೇಳಿದರು.