ಬೆಳ್ತಂಗಡಿ: ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಮನೆಯಲ್ಲಿ ಸಾಕುವ ಕೋಳಿಯೊಂದು ಗೊಡಂಬಿಯಾಕಾರದ ರೀತಿಯಲ್ಲಿ ಕೋಳಿ ಮೊಟ್ಟೆಗಳನ್ನು ಇಡುತ್ತಿರುವುದು ಕುತೂಹಲ ಮೂಡಿಸುತ್ತಿದೆ.

ಬೆಳ್ತಂಗಡಿ ತಾಲೂಕಿನ ಲಾಯ್ಲ ಗ್ರಾಮದ ಬೇಲಾಜೆ ಎಂಬಲ್ಲಿಯ ಪ್ರಶಾಂತ್ ಎಂಬವರ ಮನೆಯಲ್ಲಿ ಸಾಕಿದ್ದ ಕೋಳಿಯೊಂದು ಕಳೆದ ಕೆಲವು ದಿನಗಳಿಂದ ಮೊಟ್ಟೆ ಇಡುತಿದ್ದು, ಇದನ್ನು ಗಮನಿಸಿದಾಗ ಗೋಡಂಬಿ ರೀತಿಯಲ್ಲಿ ಕಂಡು ಬರುತ್ತಿದೆ. ಮೊಟ್ಟೆಯ ಆಕಾರ ನೋಡಿ ಎಲ್ಲರೂ ಅಶ್ಚರ್ಯಪಡುವಂತಾಗಿದೆ.