ಮಂಗಳೂರು: ಮಳಲಿ ದರ್ಗಾ ನವೀಕರಣಕ್ಕಾಗಿ ಕೆಡವಿದಾಗ ದೇವಸ್ಥಾನ ಹೋಲುವ ರಚನೆ ಪತ್ತೆಯಾದ ಹಿನ್ನಲೆಯಲ್ಲಿ ಅಲ್ಲಿ ಇದ್ದಿರಬಹುದಾದ ದೇವರ ಸಾನಿಧ್ಯದ ಕುರಿತು ತಿಳಿಯುವ ಉದ್ದೇಶದಿಂದ ಮೇ.25 ರಂದು ತಂಬೂಲ ಪ್ರಶ್ನೆ ಇಡಲು ಸ್ಥಳೀಯರು ಹಾಗೂ ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ.
ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾ ನವೀಕರಣಕ್ಕಾಗಿ ಮುಂಭಾಗವನ್ನು ಕೆಡವಲಾಗಿತ್ತು. ಈ ಸಂದರ್ಭ ಹಿಂಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ರೀತಿಯ ಮಾದರಿ ಪತ್ತೆಯಾಗಿದೆ.
ದರ್ಗಾದಲ್ಲಿ ಜೈನ ಅಥವಾ ಹಿಂದೂ ದೇವಸ್ಥಾನ ಇರುವ ಸಾಧ್ಯತೆ ಬಗ್ಗೆ ಸ್ಥಳೀಯರಲ್ಲಿ ಅನುಮಾನ ಹುಟ್ಟುಹಾಕಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಹಿಂದೂ ಪರಿಷತ್, ಜಾಗದ ಧಾರ್ಮಿಕ ಮಹತ್ವ ತಿಳಿಯಲು ನಿರ್ಧರಿಸಿ, ಆ ಜಾಗದಲ್ಲಿ ದೈವಿಕ ಶಕ್ತಿ ಇದೆಯೊ ಇಲ್ಲವೂ ಎಂದು ತಿಳಿಯಲು ತಾಂಬೂಲ ಪ್ರಶ್ನೆ ಮೊರೆ ಹೋಗಲು ಮಳಲಿ ಮಣೇಲ್ನ ರಾಮಾಂಜನೇಯ ಭಜನ ಮಂದಿರದಲ್ಲಿ ನಡೆದ ಪೂರ್ವಸಿದ್ದತಾ ಸಭೆಯಲ್ಲಿ ತೀರ್ಮಾನಕ್ಕೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.