ವಿಟ್ಲ: ದಯಾ ಕ್ರಿಯೇಷನ್ ಅರ್ಪಿಸುವ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ‘ಸ್ವರ್ಗದ ಸಿರಿ’ ತುಳು ಭಕ್ತಿಗೀತೆಯನ್ನು ಕ್ಷೇತ್ರದಲ್ಲಿ ಧರ್ಮದರ್ಶಿಗಳಾದ ಶ್ರೀಕೃಷ್ಣ ಗುರೂಜಿ ರವರು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಶ್ರೀಗಳು, ಪುಣ್ಯ ಕ್ಷೇತ್ರಗಳನ್ನು ಪರಿಚಯಿಸಲು, ದೇಗುಲದ ಹಿನ್ನೆಲೆ, ಮಹಿಮೆಯನ್ನು ಜಗತ್ತಿನೆಲ್ಲೆಡೆ ಪಸರಿಸಲು ಪ್ರಸಕ್ತ ಸನ್ನಿವೇಶದಲ್ಲಿ ತುಂಬಾ ಸಹಕಾರಿಯಾಗಿದೆ. ಸಾಹಿತ್ಯ, ಗಾಯನ, ಸಂಯೋಜನೆ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದರು.

ಈ ಸಂದರ್ಭದಲ್ಲಿ ದಯಾ ಕ್ರಿಯೇಷನ್ ನ ದಯಾನಂದ ಅಮೀನ್ ಬಾಯಾರು, ಸಾಹಿತ್ಯ ಬರೆದ ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್, ಗಾಯಕಿ ನಂದಿನಿ ಆಚಾರ್ಯ ವರ್ಕಾಡಿ, ರವಿ ಎಸ್.ಎಂ,ಕ್ಷೇತ್ರದ ಕಾರ್ಯನಿರ್ವಾಹಕ, ಭಕ್ತರು ಉಪಸ್ಥಿತರಿದ್ದರು.
ಈ ವೇಳೆ ಭಕ್ತಿಗೀತೆಗೆ ಸಾಹಿತ್ಯ ಬರೆದ ಶಶಿಕಲಾ ಭಾಸ್ಕರ್ ದೇರಾ ಬಾಕ್ರಬೈಲ್ ಮತ್ತು ಗಾಯಕಿ ನಂದಿನಿ ವರ್ಕಾಡಿ ರವರನ್ನು ಗೌರವಿಸಲಾಯಿತು.
