ಬೆಳ್ತಂಗಡಿ: ಕೊಕ್ಕಡದ ಅನ್ಯಕೋಮಿನ ಯುವಕನೋರ್ವ ಬೆಂಗಳೂರು ಮೂಲದ ಯುವತಿಯನ್ನು ವಿವಾಹವಾಗಿದ್ದು, ಈ ವಿಷಯ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿದೆ.

ಕೊಕ್ಕಡದ ಆಟೋ ಚಾಲಕ ಸಮೀರ್(27) ಬೆಂಗಳೂರು ಮೂಲದ ಬಸಮ್ಮ ರಕ್ಕಸಗಿ(22) ಎಂಬ ಯುವತಿಯನ್ನು ವಿವಾಹವಾಗಿದ್ದಾನೆ ಎನ್ನಲಾಗಿದೆ.

ಬೆಂಗಳೂರಿನ ಬಸಮ್ಮ ಸೌತಡ್ಕ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಆಟೋ ಚಾಲಕ ಸಮೀರ್ ನ ಪರಿಚಯವಾಗಿದ್ದು, ನಂತರದ ದಿನಗಳಲ್ಲಿ ಇವರಿಬ್ಬರ ಪರಿಚಯ ಪ್ರೇಮವಾಗಿ, ಮದುವೆಯ ತನಕ ಹೋಗಿದೆ ಎನ್ನಲಾಗಿದೆ. ಈ ಘಟನೆ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಅನ್ಯಕೋಮಿನ ಯುವಕ ಹಿಂದೂ ಯುವತಿಯ ಜೊತೆ ಪ್ರೀತಿಯ ನಾಟಕವಾಡಿ ಆಕೆಯನ್ನು ವಿವಾಹವಾಗಿ ಮತಾಂತರ ಮಾಡುವ ಮೂಲಕ ಲವ್ ಜಿಹಾದ್ ಕೃತ್ಯವನ್ನೆಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.