ವಿಟ್ಲ: ಮರಕ್ಕಿಣಿ ನಿವಾಸಿ ಕೆ.ಬಿ. ಕೃಷ್ಣ ಭಟ್ (84) ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಕೃಷ್ಣ ಭಟ್ ಕಾಂಗ್ರೆಸ್ಸಿನ ಹಿರಿಯ ಮುಖಂಡರಾಗಿದ್ದು, ಕೇಪು ಪಂಚಾಯಿತಿಯ ಸದಸ್ಯರಾಗಿದ್ದರು. ಅಡ್ಯನಡ್ಕ ಎಜ್ಯುಕೇಶನಲ್ ಸೊಸೈಟಿಯ ಸದಸ್ಯರಾಗಿ, ಅದೇ ರೀತಿ ಕೇಪು ಗ್ರಾಮದ ಗುರಿಕ್ಕಾರರಾಗಿದ್ದರು.

ಮೃತರು ಪತ್ನಿ, ಮೂರು ಪುತ್ರರನ್ನು ಅಗಲಿದ್ದಾರೆ.
ಕೃಷ್ಣ ಭಟ್ ರವರ ಮೃತದೇಹವನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾನ ಮಾಡಿದ್ದಾರೆ.


























