ಪುತ್ತೂರು: ಹಾವು ಕಡಿದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಕೆದಿಲದ ಕುಕ್ಕಾಜೆ ಎಂಬಲ್ಲಿ ನಡೆದಿದೆ.
ಮೃತರನ್ನು ಕೆದಿಲದ ಕುಕ್ಕಾಜೆ ನಿವಾಸಿ ಗಿರಿಜ(45) ಎಂದು ಗುರುತಿಸಲಾಗಿದೆ.
ಗಿರಿಜಾ ರವರು ಸೌದೆಯ ಅಟ್ಟಿಯಿಂದ ಸೌದೆ ತೆಗೆಯುತ್ತಿದ್ದ ವೇಳೆ ಹಾವು ಕಚ್ಚಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತಿ, ಇಬ್ಬರು ಹೆಣ್ಣು ಮತ್ತು ಓರ್ವ ಗಂಡು ಮಗನನ್ನು ಅಗಲಿದ್ದಾರೆ.


























