ಬಂಟ್ವಾಳ: ಅಕ್ರಮ ಜೂಜಾಟ ನಡೆಯುತ್ತಿದ್ದ ಜಾಗಕ್ಕೆ ಪೊಲೀಸರು ದಾಳಿ ನಡೆಸಿ, 28 ಜನರನ್ನು ವಶಕ್ಕೆ ಪಡೆದ ಘಟನೆ ಬಿ.ಸಿ.ರೋಡ್ ನಲ್ಲಿ ನಡೆದಿದೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಿ ಬಿ.ಸಿ ರೋಡ್ ನ ಶರವು ರಿಕ್ರೀಯೆಷನ್ ಕ್ಲಬ್ ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿರುವ ಬಗ್ಗೆ ಸಹಾಯಕ ಪೊಲೀಸ್ ಅಧೀಕ್ಷಕರು, ಬಂಟ್ವಾಳ ಉಪವಿಭಾಗರವರು ನೀಡಿದ ಅನುಮತಿ ಮೇರೆಗೆ ಪೊಲೀಸ್ ನಿರೀಕ್ಷಕರಾದ ವಿವೇಕಾನಂದ ರವರು ಸಿಬ್ಬಂದಿಗಳೊಂದಿಗೆ ಕ್ಲಬ್ ನಲ್ಲಿ ನಡೆಯುತ್ತಿದ್ದ ಅಕ್ರಮ ಜೂಜಾಟದ ಮೇಲೆ ದಾಳಿ ನಡೆಸಿ 28 ಜನ ಆರೋಪಿಗಳನ್ನು ಹಾಗೂ ಅಕ್ರಮ ಜೂಜಾಟಕ್ಕೆ ಬಳಸಿದ 26900/- ರೂ ಹಣವನ್ನು ಹಾಗೂ ಒಂದು ಟೇಬಲ್, ಆರು ಚೇರ್, 52 ಇಸ್ಪಿಟ್ ಹಾಳೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

























