ಪುತ್ತೂರು: ಪುತ್ತೂರಿನ ಆರ್ಯಾಪು ಮಚ್ಚಿಮಲೆ ನಿವಾಸಿಯಾದ ಬಡ ಮಹಿಳೆ ಸೀತಮ್ಮನವರಿಗೆ 94 ಸಿಸಿ ಅಡಿಯಲ್ಲಿ ನ್ಯಾಯಯುತವಾಗಿ ಹಕ್ಕುಪತ್ರ ನೀಡಲು ತಾಲೂಕು ಆಡಳಿತವು ಸುಮಾರು 5 ವರ್ಷಗಳಿಂದ ಸತಾಯಿಸುತ್ತಿದ್ದು ಅವರು ನೂರಾರು ಬಾರಿ ತಾಲೂಕು ಕಛೇರಿಗೆ ಭೇಟಿ ನೀಡಿ ವಿನಂತಿಸಿದರೂ ಇಂದಿನವರೆಗೆ ಹಕ್ಕು ಪತ್ರ ನೀಡಿರುವುದಿಲ್ಲ. ಅಧಿಕಾರಿಗಳ ಈ ದೌರ್ಜನ್ಯದ ವಿರುದ್ಧ ಮಾಜಿ ಶಾಸಕಿ, ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರು ಆನೇಕ ಬಾರಿ ಮನವಿ ನೀಡಿದ್ದು ಇತ್ತೀಚೆಗೆ ತಾವೇ ಸ್ವತಃ ತಾಲೂಕು ಕಛೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಅಧಿಕಾರಿಗಳು ಮಾರ್ಚ್ 25ರ ಒಳಗಾಗಿ ಹಕ್ಕು ಪತ್ರ ನೀಡುವ ಭರವಸೆ ನೀಡಿರುತ್ತಾರೆ.ಹೀಗಿದ್ದೂ ಇಂದಿನವರೆಗೆ ಬಡ ಮಹಿಳೆಗೆ ಹಕ್ಕುಪತ್ರ ನೀಡದೆ ಅನ್ಯಾಯ ಎಸಗಿರುತ್ತಾರೆ.ಮಾ.25ರ ಒಳಗಾಗಿ ಮಹಿಳೆಗೆ ಹಕ್ಕುಪತ್ರ ನೀಡಿ ನ್ಯಾಯ ದೊರಕಿಸಿ ಕೊಡದಿದ್ದರೆ ದಿನಾಂಕ ಮಾ.26ರಂದು ತಾಲೂಕು ಕಛೇರಿಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದ ಮಾತಿನಂತೆ, ಬಡ ಮಹಿಳೆಯ ನ್ಯಾಯ ಬದ್ಧ ಹಕ್ಕುಗಳನ್ನು ಧಕ್ಕಿಸುವ ಸಲುವಾಗಿ ಮತ್ತು ಅಧಿಕಾರ ವರ್ಗ ಬಡ ಜನತೆಯ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಮಾ.26ರಂದು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪುತ್ತೂರಿನ ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಬ್ಲಾಕ್ ನ ಪದಾಧಿಕಾರಿಗಳು, ವಲಯ ಅಧ್ಯಕ್ಷರು, ಬೂತ್ ಅಧ್ಯಕ್ಷರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕಾಗಿ ಬಡ ಮಹಿಳೆಯ ಪರವಾದ ಶಕುಂತಳಾ ಟಿ.ಶೆಟ್ಟಿಯವರ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಬೇಕಾಗಿ ಮಹಮ್ಮದ್ ಬಡಗನ್ನೂರು ಅಧ್ಯಕ್ಷರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.