ಮಂಗಳೂರು: ಮಂಗಳೂರು ನಗರದ ಅತಿದೊಡ್ಡ ಉದ್ಯಾನವನವಾದ ಕದ್ರಿ ಪಾರ್ಕ್’ನಲ್ಲಿ ಹಾಗೂ ಜಿಂಕೆ ಪಾರ್ಕ್’ನಲ್ಲಿ ಫೋಟೋಶೂಟ್ ವಿಡಿಯೋಶೂಟ್ ಗೆ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಶುಲ್ಕ ನಿಗದಿಪಡಿಸಿದೆ. ಕ್ಯಾಮಾರ ಬಳಸಿ ಪೋಟೋ ಶೂಟ್ ಗೆ 500 ರೂಪಾಯಿ ಹಾಗೂ ವಿಡಿಯೋ ಶೂಟ್ ಗೆ 5000 ರೂ. ಶುಲ್ಕ ವಿಧಿಸಲಾಗುತ್ತದೆ.
ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಇರುವ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಇತ್ತೀಚೆಗೆ ಜರುಗಿದ ಸಭೆಯಲ್ಲಿ ಪೊಟೋ, ವಿಡಿಯೋ ಶೂಟ್ ಗೆ ಶುಲ್ಕ ವಿಧಿಸುವ ಕುರಿತು ಪ್ರಸ್ತಾವನೆ ಮಾಡಲಾಗಿತ್ತು. ಇದೀಗ ಈ ಪ್ರಸ್ತಾಪನೆಯನ್ನು ಜಾರಿಗೊಳಿಸಲಾಗಿದ್ದು, ಮಾ.29 ರ ಸೋಮವಾರದಿಂದ ಈ ಕ್ರಮ ಜಾರಿಗೆ ಬರಲಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.