ಪುತ್ತೂರು: ಶ್ರೀರಾಮ ಗೆಳೆಯರ ಬಳಗ ರಿ. ಪುತ್ತಿಲ ವತಿಯಿಂದ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಮುಂಡೂರು ಗ್ರಾಮದ ಪಾಪೆತಡ್ಕದಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘ ಕರಮನೆ ಕಟ್ಟೆ ನೂತನ ಅಧ್ಯಕ್ಷರಾದ ಪುಷ್ಪ ಮೋಹನ ಕೇದಗೆದಡಿ ಮತ್ತು ಗ್ರಾಮ ಪಂಚಾಯತ್ ಸದಸ್ಯರಾಗಿರುವ ಅರುಣಾ ಅನಿಲ್ ಕಣ್ಣರ್ನೂಜಿ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಬಿ. ಸಸಿ ನೆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ಸಾಲುಮರದ ತಿಮ್ಮಕ್ಕ ಪರಿಸರಕ್ಕೆ ನೀಡಿರುವ ಕೊಡುಗೆ ಮತ್ತು ಆದರ್ಶಗಳನ್ನು ಮರು ನೆನಪಿಸುವ ಮುಖಾಂತರ ಪರಿಸರದ ಜಾಗೃತಿ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಗೆಳೆಯರ ಬಳಗದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




























