ಪುತ್ತೂರು : ಶ್ರೀ ರಾಮ್ ಟ್ರಾನ್ಸ್ ಪೋರ್ಟ್ ನ ನೂತನ ಕಛೇರಿ ನವೀಕರಣಗೊಂಡು ಪುತ್ತೂರು ಮುಖ್ಯರಸ್ತೆಯ ಮಹೇಶ್ವರ ಆರ್ಕೇಡ್ ನ ಎರಡನೇ ಮಹಡಿಯಲ್ಲಿ ಶುಭಾರಂಭಗೊಂಡಿತು.

ನವೀಕರಣಗೊಂಡ ನೂತನ ಕಚೇರಿಯನ್ನು ಶ್ರೀ ರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ನ ಜಾಯಿಂಟ್ ಎಂ.ಡಿ ಸುದರ್ಶನ್ ಬಿ ಹೊಳ್ಳ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ರಾಮ್ ಟ್ರಾನ್ಸ್ಪೋರ್ಟ್ ನ ರಾಜ್ಯ ಮುಖ್ಯಸ್ಥ ಶರತ್ ಚಂದ್ರ ಭಟ್ ಕಾಕುಂಜೆ, ರಾಜ್ಯ ರಿಖವರಿ ಮುಖ್ಯಸ್ಥ ನಾಗರಾಜ್, ರೀಜನಲ್ ಮುಖ್ಯಸ್ಥ ಚೇತನ್ ಅರಸ್, ಕಟ್ಟಡ ಮಾಲಕರಾದ ಸಂತೋಷ್, ಶಾಖೆಯ ಮುಖ್ಯಸ್ಥ ಜಯಪ್ರಕಾಶ್ ರೈ ಮತ್ತು ಸಿಬ್ಬಂದಿಗಳು ಗ್ರಾಹಕರು ಉಪಸ್ಥಿತರಿದ್ದರು.


ಸಂಸ್ಥೆಯಲ್ಲಿ ಎಲ್ಲಾ ರೀತಿಯ ಸಾಲ ಸೌಲಭ್ಯ, ವಾಹನ ಸಾಲ, ಚಕ್ರ (TYRE) ಸಾಲ, ಚಿನ್ನದ ಮೇಲೆ ಸಾಲ,ದ್ವಿಚಕ್ರ ವಾಹನ ಸಾಲ, ಪರ್ಸನಲ್ ಸಾಲ ಸೌಲಭ್ಯ ದ ಜೊತೆಗೆ ವಾಹನ ಇನ್ಸೂರೆನ್ಸ್ ಸೌಲಭ್ಯವೂ ಗ್ರಾಹಕರಿಗೆ ದೊರೆಯಲಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

































