ಪುತ್ತೂರು: ಯುವ ಕಾಂಗ್ರೆಸ್ ಆಯೋಜಿಸಿದ್ದ ‘ ಹಸ್ತ ಲಾಘವ ಎಂಬ ಕಾರ್ಯಕ್ರಮ ಹಲವು ಗೊಂದಲಕ್ಕೆ ಕಾರಣವಾಗಿದ್ದು ಇಂದು ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಶೋಕಾಸ್ ನೋಟೀಸ್ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನೊಟೀಸ್ ನಲ್ಲಿ ಏನಿದೆ..!? ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ತಾವು ದಿನಾಂಕ 26.06.2022ರಂದು ಆರ್ಯಾಪು ಜಿಲ್ಲಾ ಪಂಚಾಯತ್ ಕ್ಷೇತ್ರದ “ಜನಪ್ರತಿನಿಧಿಗಳ, ನಾಯಕರ ಹಾಗೂ ಕಾರ್ಯಕರ್ತರ ಸಭೆಯನ್ನು “ಹಸ್ತಲಾಘವ” ಎಂಬ ಹೆಸರಿನಲ್ಲಿ ಆಯೋಜಿಸಲು ಹೊರಟಿರುತ್ತೀರಿ. ಜನಪ್ರತಿನಿಧಿಗಳ ಸಭೆ ನಡೆಸುವುದು ಯುವ ಕಾಂಗ್ರೆಸ್ ಸಮಿತಿಗಳ ವ್ಯಾಪ್ತಿಗೆ ಬರುವುದಿಲ್ಲ.ಅದಲ್ಲದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈ ಸಭೆಯ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೆ ತಂದು ಅವರ ಸೂಚನೆಯ ಮೇರೆಗೆ ಸಭೆಯನ್ನು ರದ್ದುಗೊಳಿಸಲು ತಮಗೆ ನೊಟೀಸ್ ನೀಡಿದ್ದರು. ತಾವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೀಡಿರುವ ಸೂಚನೆಯ ವಿಷಯವನ್ನು ಪತ್ರಿಕಾ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಕಂಡು ಬಂದಿರುತ್ತದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ನಿಯಮಗಳ ಉಲ್ಲಂಘಣೆ ಮತ್ತು ಪಕ್ಷಕ್ಕೆ ಮುಜುಗರ ಉಂಟಾಗುವಂತೆ ಮಾಧ್ಯಮಗಳಿಗೆ ವರದಿ ನೀಡಿರುವ ಬಗ್ಗೆ ಮುಂದಿನ ಮೂರು ದಿನಗಳೊಳಗೆ ಉತ್ತರಿಸ ತಕ್ಕದು. ತಪ್ಪಿದಲ್ಲಿ ನಿಮ್ಮ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು.

























