ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ, ಪಾದೆಕಲ್ಲು- ಜರಿ, ನಿವಾಸಿಗಳು ಕಳೆದ ನೂರು ವರ್ಷಗಳ ಹಿಂದೆ ಅರಣ್ಯ ಪ್ರದೇಶದ ಬದಿಗಳಲ್ಲಿ ವಾಸಿಸುತ್ತಿದ್ದ ಕೆಲ ನಿವಾಸಿಗಳಿಗೆ ಈ ಮೊದಲೇ ಹಕ್ಕು ಪತ್ರ ವಿತರಿಸಿದ್ದು, ಈ ಹಿನ್ನೆಲೆ ಫಲಾನುಭವಿಗಳ ಸಭೆಯ ನಂತರ ನಿವೇಶನ ಗುರುತಿಸುವ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಮಚಂದ್ರ ಪೂಜಾರಿ, ಉಪಾಧ್ಯಕ್ಷೆ ಉಷಾ, ಸದಸ್ಯರಾದ ಜಯಪ್ರಕಾಶ್ ಬದಿನಾರು, ಜಗನ್ನಾಥ್ ಶೆಟ್ಟಿ ನಡುಮನೆ ,ಸದಸ್ಯ ವಿಶ್ವನಾಥ ಕೃಷ್ಣಗಿರಿ, ರಾಮಣ್ಣ ಗೌಡ ಗುಂಡೋಳೆ ,ಮಲ್ಲಿಕಾ ಅಶೋಕ್ ಪೂಜಾರಿ ,ಪುಷ್ಪ ,ಮೋಹಿನಿ ಕೋಡಿ , ಗ್ರಾಮಾಭಿವೃದ್ಧಿ ಅಧಿಕಾರಿ ಚಿತ್ರಾವತಿ ಮತ್ತು ಕಾರ್ಯದರ್ಶಿ ರಮೇಶ್ ಮತ್ತು ನಿವೇಶನ ಫಲಾನುಭವಿಗಳು ಉಪಸ್ಥಿತರಿದ್ದರು.

ಈ ವೇಳೆ ಜಾಗವನ್ನು ಗುರುತಿಸಿ, ಫಲಾನುಭವಿಗಳಿಗೆ ತೋರಿಸಲಾಯಿತು.