ವಿಟ್ಲ: ಕೇಂದ್ರ ಸರಕಾರ ಪ್ರಸ್ತುತವಾಗಿ ದೇಶದಲ್ಲಿ ಜಾರಿಗೊಳಿಸಿದ ಅಗ್ನಿಪಥ್ ಯೋಜನೆಯಿಂದ ದೇಶದ ಯುವ ಜನತೆಯ ಭವಿಷ್ಯವನ್ನು ಕತ್ತಲೆಯಲ್ಲಿ ಇಡುವ ಕೆಲಸ ಮಾಡುತ್ತಿರುವುದು ಅತ್ಯಂತ ದುರಾದೃಷ್ಟಕರ ಎಂದು ಯೂತ್ ಕಾಂಗ್ರೆಸ್ ಮುಖಂಡ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಆರೋಪಿಸಿದ್ದಾರೆ.
ಕೇಂದ್ರ ಸರಕಾರ ಈ ಯೋಜನೆಯನ್ನು ಯಾವುದೇ ರೀತಿಯಲ್ಲಿ ಚರ್ಚಿಸದೇ ರಾತ್ರೋ ರಾತ್ರಿ ಜಾರಿಗೊಳಿಸಿದ ಉದ್ದೇಶ ಆದರೂ ಏನು ಇದು ನಿಜವಾಗಿಯೂ ಭಾರತ ದೇಶದ ಯುವ ಸಮುದಾಯಕ್ಕೆ ಮಾಡಿರುವ ದೊಡ್ಡ ಅನ್ಯಾಯ ಎಂದು ಹೇಳಿದರು.
ದೇಶದ ಯುವಕರು ದೇಶದ ಬೆನ್ನೆಲುಬು ಯುವ ಸಮುದಾಯದಿಂದ ದೇಶ ಪ್ರಗತಿ ಕಾಣಲು ಸಾಧ್ಯವಿದೆ. ಇಂತಹ ಸಮಯದಲ್ಲಿ ಭಾರತೀಯ ಸೈನ್ಯದಲ್ಲಿ ಯುವಕರಿಗೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ನಿರಕಾರಣೆ ಮಾಡುವ ಮೂಲಕ ಕೇವಲ 4 ವರ್ಷ ಸೈನ್ಯ ಆ ಮೇಲೆ ಯುವಕರನ್ನು ಮನೆಗೆ ಕಳುಹಿಸುವ ಕೇಂದ್ರ ಬಿಜೆಪಿ ಸರಕಾರದ ಅಗ್ನಿಪಥ್ ಯೋಜನೆಯು ಯುವಕರಿಗೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗಿದೆ ಮತ್ತು ಶೀಘ್ರದಲ್ಲೇ ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರಕಾರ ಪಡೆಯುವಂತೆ ಯೂತ್ ಕಾಂಗ್ರೆಸ್ ಮುಖಂಡ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಒತ್ತಾಯಿಸಿದ್ದಾರೆ.


























