ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಬಾನೊಟ್ಟು ಎಂಬಲ್ಲಿ ಕೆಲವು ದಶಕಗಳ ಹಿಂದೆ ರೈಲು ಮಾರ್ಗ ನಿರ್ಮಾಣ ವೇಳೆ ತೆರವುಗೊಂಡ ಪ್ರಾಚೀನ ದೇವಾಲಯದ ಜೀರ್ಣೋದ್ಧಾರ ಉದ್ದೇಶಿತ ಅಷ್ಟಮಂಗಲ ಪ್ರಶ್ನಾ ಚಿಂತನೆಯು ,ದೈವಜ್ಞ ಕೇಶವ ಭಟ್ ಮಿತ್ತೂರು ರವರ ನೇತೃತ್ವದಲ್ಲಿ ಜೂನ್ 20ರಿಂದ 22ರ ವರೆಗೆ ಜರುಗಿತು.

ಪ್ರಶ್ನಾ ಚಿಂತನೆಯ ಮೊದಲ ದಿನ ಭಕ್ತಾದಿಗಳಿಂದ ದೈವಜ್ಞರ ಸ್ವಾಗತ ಜರುಗಿತು.ಬಳಿಕ ಬಾನೊಟ್ಟು ದೇವಾಲಯದ ಅವಶೇಷಗಳ ಸಮೀಪದಲ್ಲಿ ರಾಶಿ ಪೂಜೆ ಜರುಗಿತು.ಅಷ್ಟ ಮಂಗಲಕ್ಕೆ ಹಾಕುವ ಮಂಡಲ ,ಹೂವು,ಗಂಧ ಪುಷ್ಪವನ್ನು ಒಂದು ತಟ್ಟೆಯಲ್ಲಿಟ್ಟು ಒಬ್ಬ ಬಾಲಕನ ಕೈಗೆ ಕೊಟ್ಟು ಮಂಡಲಕ್ಕೆ ಮೂರು ಪ್ರದಕ್ಷಿಣೆ ಹಾಕಿ ಸ್ವರ್ಣನ್ಯಾಸ ಮಾಡುವ ಮೂಲಕ ಪ್ರಶ್ನಾ ಚಿಂತನೆಯ ಆರಂಭ ಆಯಿತು.ಈ ಪ್ರಶ್ನಾ ಚಿಂತನೆಯ ಸಮಯದಲ್ಲಿ ಮಾಣಿ ಗ್ರಾಮಕ್ಕೆ ಸಂಬಂಧಿಸಿದಂತೆ ಹಲವಾರು ಕುತೂಹಲಕಾರಿ ಸಂಗತಿ ಅನಾವರಣಗೊಂಡಿತು. ಹಲವಾರು ವರ್ಷಗಳಿಂದ ಜನರ ದಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಹಲವು ಗೊಂದಲ ನಿವಾರಿಸಲು ಯಶಸ್ವಿಯಾಯಿತು.

ರೈಲುಮಾರ್ಗದ ನಿರ್ಮಾಣ ದ ವೇಳೆ ತೆರವು ಗೊಂಡ ಪ್ರಾಚೀನ ದೇವಾಲಯ
ಸುಮಾರು 700 ವರ್ಷದ ಪ್ರಾಚೀನವಾದ ಆರಾಧನ ಕೇಂದ್ರವಾಗಿತ್ತು. ಈ ಆರಾಧನಾ ಕೇಂದ್ರ ಮಠಾಯತನ ವ್ಯವಸ್ಥೆ( ವಿವಿಧ ದೇವರುಗಳ ಒಂದೇ ಗರ್ಭಗುಡಿಯಲ್ಲಿ ಆರಾಧನೆ-ವೇದಾದ್ಯಯನ ಹೋಮ ಹವನಗಳು ನಡೆಯುತ್ತಿದ್ದ ಜಾಗ) ಗೆ ಒಳಪಟ್ಟ ಲಕ್ಷಣಗಳು ಗೋಚರಿಸಿದೆ.ಅಲ್ಲೇ ಸನಿಹದಲ್ಲಿ ಸನ್ಯಾಸಿಕೋಡಿ ಎಂಬ ಜಾಗದಲ್ಲಿ ಇರುವ ಕಟ್ಟೆಗೂ ಈ ಕ್ಷೇತ್ರಕ್ಕೂ ಸಂಬಂಧ ಇದೆ.ಅದನ್ನು ಈ ಕ್ಷೇತ್ರದ ವತಿಯಿಂದ ಜೀರ್ಣೋದ್ಧಾರ ಮಾಡಬೇಕೆಂದು ಕಂಡು ಬಂದಿದೆ.ಈ ನಾಶವಾದ ಆರಾಧನ ಕೇಂದ್ರ ಇದೊಂದು ಶೈವ ವೈಷ್ಣವ ಸಂಮಿಶ್ರ ಆರಾಧನಾ ಕೇಂದ್ರ ಆಗಿದ್ದು, ಒಂದು ಕಾಲದಲ್ಲಿ ಈ ಕ್ಷೇತ್ರಕ್ಕೆ ನೈವೇದ್ಯ ಕ್ಕೆ ಅಕ್ಕಿಯನ್ನು ಒದಗಿಸುವ ಉಂಬಳಿ ಭೂಮಿಗಳಿದ್ದವು.

ಪ್ರಶ್ನಾ ಚಿಂತನೆಯ ಆಧಾರದ ಮೇಲೆ ಅದರ ಹೆಸರು “ಬಾನೊಟ್ಟು ಮಠ ಉಮಾಮಹೇಶ್ವರ ಕ್ಷೇತ್ರ ” ಎಂಬುದೇ ಆಗಿದೆ. ಇಲ್ಲಿ ಶಿವನನ್ನು ಪ್ರಧಾನ ದೇವರಾಗಿ ಆರಾಧನೆ ಜೊತೆಯಲ್ಲಿ ವೆಂಕಟರಮಣ ದೇವರ ಆರಾಧನೆ ಪ್ರಾಚೀನ ಕಾಲದಲ್ಲಿ ನಡೆಯುತಿತ್ತು. ವಿವಿಧ ದೇವರ ಆರಾಧನೆ ಇಲ್ಲಿ ಎಂಬ ಸಂಗತಿ ತಿಳಿದು ಬಂದಿದೆ.
ಈ ಆರಾಧನೆ ಕೇಂದ್ರದಲ್ಲಿ ಪ್ರಾಚೀನ ಕಾಲದಲ್ಲಿ ನವರಾತ್ರಿ ನಡೆಯುತಿತ್ತು.ಮುಂದೆಯೂ ಕ್ಷೇತ್ರ ನಿರ್ಮಾಣ ಆದ ಬಳಿಕವೂ ನಡೆಯಬೇಕು. ಈ ಆರಾಧನೆ ಕೇಂದ್ರ ಕ್ಷೇತ್ರದ ಸಂಬಂಧಿ ನಾಗ ದೇವರು ರಕ್ತೇಶ್ವರಿ,ಚಾಮುಂಡಿ ( ಗುಡ್ಡ ಚಾಮುಂಡಿ) ,ಕೊರತಿ ಮತ್ತು ಪಂಜುರ್ಲಿ ಗುಳಿಗ ಸಾನ್ನಿದ್ಯ ಮೂಲದಲ್ಲಿ ಇತ್ತು.ನಾಗ ಮತ್ತು ರಕ್ತೇಶ್ವರಿ ಸಾನ್ನಿದ್ಯ ರೈಲು ಮಾರ್ಗ ನಿರ್ಮಾಣ ಸಮಯದಲ್ಲಿ ತೆರವುಗೊಂಡಿದ್ದು ನಾಗ ಸಾನ್ನಿಧ್ಯ ಮಾತ್ರ ಸಮೀಪದ ಜಾಗದಲ್ಲಿ ಆರಾಧನೆ ಪಡೆಯುತ್ತಿವೆ.ಉಳಿದವುಗಳನ್ನು ಸ್ತಳಾಂತರಿದ ನೂತನ ದೇವಾಲಯ ನಿವೇಶನದಲ್ಲಿ ಪ್ರತಿಷ್ಟೆ ಮಾಡಬೇಕಿದೆ.

ಪ್ರಾಚೀನ ಕಾಲದಲ್ಲಿ ಈ ಆರಾಧನ ಕೇಂದ್ರಕ್ಕೆ ಗ್ರಾಮದ ದೈವದ ಒಲಸರಿ ಇತ್ತು. ಗ್ರಾಮದ ಪ್ರಧಾನ ದೈವ ಗುಡ್ಡೆ ಚಾಮುಂಡಿ ದೈವಕ್ಕೂ ಈ ಕ್ಷೇತ್ರಕ್ಕೂ ಸಂಬಂಧ ಇದೆ. ಈ ದೇವಾಲಯದ ಪಾಳುಬಿದ್ದ ತೀರ್ಥ ಬಾವಿಯ ನೀರು ವಾತ ರೋಗ ನಿವಾರಕ.ಅದನ್ನು ಸ್ವಚ್ಚಗೊಳಿಸಿ ಸ್ಮಾರಕ ಆಗಿ ಕ್ಷೇತ್ರದ ಆದಿ ಜಾಗವಾಗಿ ಸಂರಕ್ಷಣೆ ಮಾಡಿ ಬರಬೇಕು. ಮಾಣಿ ಉಳ್ಳಾಲ್ತಿ ದೈವಕ್ಕೂ ಈ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಈ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.
ಗ್ರಾಮ ದೈವಗಳಿಗೆ ಈ ಕ್ಷೇತ್ರ ನಿರ್ಮಾಣ ಮಾಡುವ ವೇಳೆ ಪರಿಸರದಲ್ಲಿ ಸೂಕ್ತ ಸ್ಥಾನಮಾನ ಕೊಟ್ಟು ಆರಾಧನೆ ನಿವೃತ್ತಿ ರಾಶಿಯಲ್ಲಿ ಕಂಡು ಬಂದಂತೆ ಮಾಡಿಕೊಂಡು ಬರುವುದು.
ಈಗ ಕಾರ್ಯವನ್ನು ಮಾಡುತ್ತಿರುವ ಪ್ರಸ್ತುತ ಕೋರ್ ಕಮಿಟಿ ಗೆ ದೈವಾನುಕೂಲ. ಈ ಸಮಿತಿಯ ಸದಸ್ಯರ ಸಂಖ್ಯೆ ಬೆಸ ಸಂಖ್ಯೆಯ ಲ್ಲಿ ಸಂಖ್ಯೆ 21ರ ವರೆಗೆ ವಿಸ್ತರಿಸಿ ಗ್ರಾಮಸ್ಥರು
ಕೆಲಸಕ್ಕೆ ಇಳಿದರೆ ಕೆಲಸ ಆಗುತ್ತದೆ. ವರ್ಕಿಂಗ್ ಕಮಿಟಿ ಸದ್ರಿ ಸದಸ್ಯರ ಸಂಖ್ಯೆ ಏರಿಸಬಹುದು.ಕಳೆಯುವ ಹಾಗಿಲ್ಲ.ಸದ್ರಿ ಕ್ಷೇತ್ರ ನಿರ್ಮಾಣ ಆದರೆ ಗ್ರಾಮಕ್ಕೆ ಕ್ಷೇಮ.ಗ್ರಾಮದಿಂದ ಈ ಕ್ಷೇತ್ರ ನಿರ್ಮಾಣ ಕಾರ್ಯ ಆರಂಭ ಪ್ರಗತಿ ಆಗುತ್ತಿದ್ದಂತೆ ಭಕ್ತಾದಿಗಳ ಸಹಕಾರ ಬರುತ್ತದೆ.ಅದಕ್ಕೆ ಮುಂಚೆ ನಿವೃತ್ತಿ ರಾಶಿಯಲ್ಲಿ ಬಂದಂತಹ ಕೆಲವು ಪರಿಹಾರ ಮಾಡಬೇಕು ಎಂದು ತಿಳಿದು ಬಂದಿದೆ.

ಪ್ರಶ್ನಾ ಚಿಂತನೆಯ ಕಾರ್ಯಕ್ರಮದಲ್ಲಿ ನೂಜಿಬೈಲ್ ರಮೇಶ್ ಭಟ್,ವೇದ ವಿದ್ವಾಂಸರಾದ ಪಳ್ಳತ್ತಡ್ಕ ಘನಪಾಟಿ ಶಂಕರನಾರಾಯಣ ಭಟ್, ಪ್ರಶ್ನಾ ಚಿಂತನ ಕೋರ್ ಕಮಿಟಿ ಅಧ್ಯಕ್ಷ ಸದಾಶಿವ ಆಚಾರ್ಯ ಸೇರಿದಂತೆ ಊರಿನ ಪರವೂರಿನ ಭಕ್ತಾದಿಗಳು ಉಪಸ್ಥಿತರಿದ್ದರು.


























