ಸವಣೂರು: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳ ಮೂಲಕ ಶೈಕ್ಷಣಿಕ ಕ್ಷೇತ್ರದ ಅಪ್ರತಿಮ ಸಾಧಕರಾಗಿ ಮೂಡಿ ಬಂದ ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ರವರಿಗೆ ಸವಣೂರು ಪುಣ್ಚಪ್ಪಾಡಿ, ಪಾಲ್ತಾಡಿಯ ಶಿಕ್ಷಣ ಪ್ರೇಮಿಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮ ‘ಸೂರ್ಯತೇಜ’ ಜೂ.27 ರಂದು ಸಂಜೆ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ಕೆ.ರಾಜೀವಿ ವಿ.ಶೆಟ್ಟಿ ವಹಿಸಲಿದ್ದಾರೆ. ಪ್ರಾಂಶುಪಾಲ ಕೃಷ್ಣ ಭಟ್ ರವರು ಬಿ.ವಿ.ಸೂರ್ಯನಾರಾಯಣ ರವರನ್ನು ಸನ್ಮಾನಿಸಲಿದ್ದಾರೆ.
ಅತಿಥಿಗಳಾಗಿ ಸವಣೂರು ಸ.ಪ.ಪೂ.ಕಾಲೇಜಿನ ಪ್ರಾಚಾರ್ಯೆ ಪದ್ಮಾವತಿ ಎನ್.ಪಿ. ರವರು ಪಾಲ್ಗೊಳ್ಳಲಿದ್ದಾರೆ.
