ಪುತ್ತೂರು: ಶಾಂತಿಗಿರಿ ವಿದ್ಯಾ ನಿಕೇತನ ಸ್ಕೂಲ್ ಪಂಜಳದಲ್ಲಿ ಅಂತರಾಷ್ಟ್ರೀ ಯ ಯೋಗ ದಿನವನ್ನು ಕರ್ನಾಟಕ ಇಂಟೆಗ್ರೇಟೆಡ್ ಡೆವಲಪಮೆಂಟ್ ಸೊಸೈಟಿ (ಕಿಡ್ಸ್ )ಪುತ್ತೂರು ಸಂಸ್ಥೆಯ ಸಹಯೋಗದೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ರೆ .ಫಾ. ಬಿಜು ಕೆ.ಜಿ, ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಶ್ಯಾಮ ಪಿ ಭಟ್, ಯೋಜನಾ ಸಂಯೋಜಕರು ಕಿಡ್ಸ್ ಸಂಸ್ಥೆ ರವರು ವಹಿಸಿದ್ದರು.

ರೆ.ಫಾ. ಬಿಜು ಕೆ. ಜಿ ಯವರು ಯೋಗ ದಿನದ ಆಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ಯಾಮ ಪಿ ಭಟ್ ರವರು ಯೋಗದ ಮಹತ್ವ, ಯೋಗಾಸನದಿಂದ ಜೀವನ ಶೈಲಿಯಲ್ಲಿ ಆಗುವ ಆರೋಗ್ಯಕರ ಬದಲಾವಣೆ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಶಾಲಾ ಮಕ್ಕಳ ವಯೋಮಾನಕ್ಕೆ ಪೂರಕವಾದ ರೀತಿಯಲ್ಲಿ ವಿವಿಧ ಭಂಗಿಯಲ್ಲಿ ಯೋಗಾಸನ ಪ್ರದರ್ಶನ ಹಾಗೂ ಯೋಗಾಸನ ಅಭ್ಯಾಸವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಿಕ್ಷಕ – ಶಿಕ್ಷಕೇತರ ವೃಂದದವರು, ಶಾಲಾ ಮಕ್ಕಳು ಭಾಗವಹಿಸಿದ್ದರು. ಶಿಕ್ಷಕಿಯರಾದ ಅಶ್ವತಿ ಅರವಿಂದ್ ಸ್ವಾಗತಿಸಿದರು, ಶೈಲಜಾ ಎಂ. ಶೆಟ್ಟಿ ವಂದನಾರ್ಪಣೆ ನಡೆಸಿದರು ಹಾಗೂ ಕು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

