ಉತ್ತರ ಕನ್ನಡ: ಜಿಲ್ಲೆಯಲ್ಲಿ ಭಾಷಾ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಕಾರವಾರದಲ್ಲಿ ಕನ್ನಡ, ಕೊಂಕಣಿ ಭಾಷೆಗಳ ನಡುವೆ ಏರ್ಪಟ್ಟಿದ್ದ ವಿವಾದವೀಗ ಭಟ್ಕಳಕ್ಕೆ ಹರಡಿದ್ದು, ಕನ್ನಡದ ಜೊತೆಗೆ ಉರ್ದುವಿನಲ್ಲಿ ಭಟ್ಕಳ ಪುರಸಭೆಯ ನಾಮಫಲಕಗಳನ್ನ ಬರೆಯಿಸುತ್ತಿರುವುದು ಇದೀಗ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಒಂದೆಡೆ ಉರ್ದು ನಾಮಫಲಕ ಅಳವಡಿಕೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದು ಹೋರಾಟ ನಡೆಸುತ್ತಿದ್ದರೆ ಇನ್ನೊಂದೆಡೆ ಕೆಲ ಮುಸಲ್ಮಾನ ಸಂಘಟನೆಯವರು ಉರ್ದು ಭಾಷಾ ನಾಮಫಲಕ ತೆರವು ಮಾಡದಂತೆ ಒತ್ತಾಯಿಸಿದ್ದಾರೆ. ಭಾಷಾ ವಿವಾದ ಈಗ ಬಳ್ಳಿಯಂತೆ ಹಬ್ಬುತ್ತಿದೆ.

ಕೆಲ ದಿನಗಳ ಹಿಂದೆಷ್ಟೇ ಭಟ್ಕಳ ಪುರಸಭೆ ಕಟ್ಟಡಕ್ಕೆ ಹೊಸದಾಗಿ ಸುಣ್ಣಬಣ್ಣ ಬಳಿಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಕಟ್ಟಡದ ಮುಂಭಾಗದಲ್ಲಿ ಪುರಸಭಾ ಕಚೇರಿ, ಭಟ್ಕಳ ಎಂಬ ನಾಮಫಲಕ ಅಳವಡಿಸಲಾಗುತ್ತಿದೆ.
ಈ ವೇಳೆ ಕನ್ನಡ, ಇಂಗ್ಲಿಷ್ ಜೊತೆಗೆ ಉರ್ದುವಿನಲ್ಲೂ ನಾಮಫಲಕ ಅಳವಡಿಸುತ್ತಿರುವುದಕ್ಕೆ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಉರ್ದು ನಾಮಫಲಕ ತೆರವು ಮಾಡುವಂತೆ ಪುರಸಭೆಯೆದುರು ಪ್ರತಿಭಟಿಸಿವೆ.
ಈ ವೇಳೆ ಕಚೇರಿ ಒಳಗೆ ನುಗ್ಗಲು ಯತ್ನಿಸಿದ್ದ ಕನ್ನಡಪರ ಕಾರ್ಯಕರ್ತರನ್ನ ಪೊಲೀಸರು ಚದುರಿಸಿದ್ದಾರೆ. ಯಾವುದೇ ಕಾರಣಕ್ಕೂ ಉರ್ದು ಭಾಷೆಯಲ್ಲಿ ನಾಮಫಲಕ ಹಾಕಬಾರದು ಎಂದು ಕನ್ನಡ ಪರ ಸಂಘಟನೆಯವರು ಆಗ್ರಹಿಸುತ್ತಿದ್ದಾರೆ. ಜತೆಗೆ ಮುಸಲ್ಮಾನ ಸಂಘಟನೆಯವರು ಉರ್ದು ನಾಮಫಲಕ ತೆರವು ಮಾಡದಂತೆ ಒತ್ತಾಯಿಸಿ ಪ್ರತಿಭಟನೆ ಕೂಡಾ ಮಾಡಿದ್ದಾರೆ..
ಸ್ಥಳೀಯ ಭಾಷೆಯಲ್ಲಿ ನಾಮಫಲಕಕ್ಕೆ ಎಲ್ಲಿಯೂ ಅವಕಾಶವಿಲ್ಲ. ಹಾಗಿದ್ದರೆ ರಾಜ್ಯದಾದ್ಯಂತ ನಾಮಫಲಕಗಳನ್ನು ಕನ್ನಡ ಇಂಗ್ಲೀಷ್ ಮತ್ತು ಹಿಂದಿ ಈ ಮೂರು ಭಾಷೆಗಳಿಗೆ ಆದ್ಯತೆ ಬಿಟ್ಟು ಬೇರೆ ಯಾವುದೇ ಭಾಷೆಗಳಿಗೆ ಆದ್ಯತೆ ನೀಡಲಾಗುವುದಿಲ್ಲ. ಈ ನಡುವೆ ಪ್ರಾದೇಶಿಕ ಭಾಷೆಗೆ ತಕ್ಕಂತೆ ನಾಮಫಲಕಗಳನ್ನು ಅಳವಡಿಸುತ್ತಾ ಬಂದರೆ ಕೊಂಕಣಿ, ಮರಾಠಿ, ಉರ್ದು, ನವಾಯತ್ ಹೀಗೆ ಹತ್ತು ಹಲವು ಬಾಷೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ ಅಂತ ಪ್ರತಿಭಟನಾಕಾರರು ಹೇಳಿದ್ದಾರೆ.

ಹೀಗೆ ಮಾಡುವುದರಿಂದ ಪ್ರತಿಯೊಂದು ಬೇರೆ ಬೇರೆ ಭಾಷೆಯವರು ಪಟ್ಟು ಹಿಡಿದು ತಾವು ಮಾತನಾಡುವ ಭಾಷೆಯಲ್ಲಿ ನಾಮಫಲಕಗಳಿಗೆ ಬೇಡಿಕೆಯಿಡುತ್ತಾರೆ. ಆಗ ಕರ್ನಾಟಕದ ಕನ್ನಡಕ್ಕೆ ಭಾಷೆಗೆ ಬೆಲೆ ಇಲ್ಲದಂತಾಗುತ್ತದೆ ಎಂದು ಪ್ರತಿಭಟನಾಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ಸಿಪಿಐ ಮಹಾಬಲೇಶ್ವರ ನಾಯ್ಕ ಅವರಿಗೆ ಉರ್ದು ನಾಮಫಲಕ ತೆರವು ಮಾಡಬೇಕೆಂದು ಶ್ರೀಭುವನೇಶ್ವರಿ ಕನ್ನಡ ಸಂಘದಿಂದ ಮನವಿ ಸಲ್ಲಿಸಲಾಗಿದ್ದು, ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಒಟ್ಟಾರೆ ಭಾಷಾ ವಿವಾದ ಜಟಾಪಟಿ ಎಲ್ಲಿ ಬಂದು ನಿಲ್ಲುತ್ತೆ ಎನ್ನೋದು ಕಾದು ನೋಡಬೇಕಿದೆ..