ಪುತ್ತೂರು: ನಗರ ಕಾಂಗ್ರೆಸ್ ಪದಾಧಿಕಾರಿಗಳು ಪ್ರತಿ ಬೂತ್ ನ ಜವಾಬ್ದಾರಿ ತೆಗೆದುಕೊಂಡು ಪಕ್ಷವನ್ನು ಸಂಘಟಿಸಬೇಕು ಅದರೊಂದಿಗೆ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಹೇಳಿದರು.

ಅವರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ನಗರ ಕಾಂಗ್ರೆಸ್ ಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನಗರಸಭೆಯ ಬಿಜೆಪಿ ಆಡಳಿತ ಸ್ವಜನ ಪಕ್ಷ ಪಾತ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ, ವಾರ್ಡಿನ ಜನರ ಸಮಸ್ಯೆಯನ್ನು ಕೇಳುವವರೇ ಇಲ್ಲ, ಕಾಂಗ್ರೆಸ್ ಸದಸ್ಯರ ವಾರ್ಡಿನ ಅಭಿವೃದ್ಧಿಗಾಗಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ, ಕಾಂಗ್ರೆಸ್ ಆಡಳಿತ ಇದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿರುತ್ತದೆ , ಕಾಂಗ್ರೆಸ್ ಅಭಿವೃದ್ದಿ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಿರುವುದಿಲ್ಲ ಆದರೆ ಬಿಜೆಪಿ ಆಡಳಿತದಲ್ಲಿ ಅವಶ್ಯಕತೆ ಇಲ್ಲದ ಕಡೆ ಅನುದಾನ ಖರ್ಚು ಮಾಡಲಾಗುತ್ತಿದೆ.ಮನೆ ತೆರಿಗೆ ಹಾಗೂ ನೀರಿನ ತೆರಿಗೆಯನ್ನು ವಿಪರೀತವಾಗಿ ಏರಿಸಲಾಗಿದೆ. ಈ ರೀತಿಯ ಬಿಜೆಪಿಯ ದುರಾಡಳಿತದ ವಿರುದ್ಧ ನಾವು ನಿರಂತರವಾಗಿ ಪ್ರತಿಭಟಿಸುವ ಕೆಲಸ ನಗರ ಕಾಂಗ್ರೆಸ್ ವತಿಯಿಂದ ಮಾಡಬೇಕಾಗುತ್ತದೆ.
ಭ್ರಷ್ಟಾಚಾರ ಎಂಬುದು ಸಮಾಜಕ್ಕೆ ಅಂಟಿದ ದೊಡ್ಡ ಕ್ಯಾನ್ಸರ್,ಇದರ ವಿರುದ್ಧ ಕಾಂಗ್ರೆಸ್ ಕಾರ್ಯ ಕರ್ತರು ಹೋರಾಟ ನಡೆಸಬೇಕು. ಇದನ್ನು ಹೋಗಲಾಡಿಸಲು ಸುದ್ದಿಯವರು ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕೈಜೋಡಿಸುವ ಕೆಲಸ ಮಾಡಿ ಭ್ರಷ್ಟಾಚಾರದ ವಿರುದ್ಧ ಜನ ಜಾಗೃತಿ ಮೂಡಿಸಲು ಕಾಂಗ್ರೆಸ್ ಕಾರ್ಯಕರ್ತರು ಕಾರ್ಯ ಪ್ರವ್ರತ್ತರಾಗಬೇಕು ಎಂದು ಹೇಳಿದರು.

ಸಭೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ನಗರ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಮಂಜುನಾಥ್ ಕೆಮ್ಮಾಯಿ, ಉಷಾ ಸಾಮೆತಡ್ಕ, ಸುರೇಶ್ ಪೂಜಾರಿ ಮೊಟ್ಟೆತಡ್ಕ,ನಾರಾಯಣ ಕುಡ್ವ,ಸಿಟಿ ಓ ರಸ್ತೆ, ಸೂಫಿ ಬಪ್ಪಳಿಗೆ, ಮುಕೇಶ್ ಕೆಂಮಿಂಜೆ, ಪ್ರದಾನ ಕಾರ್ಯದರ್ಶಿಗಳಾದ ಸೂರಜ್ ಶೆಟ್ಟಿ ಸಾಮೆತಡ್ಕ,ಅಬ್ದುಲ್ ರಝಕ್ ಆರ್ ಪಿ ಪಡೀಲ್,ಶರತ್ ಕೇಪುಲು,ಯೂಸುಫ್ ಸಾಲ್ಮರ,ವಿಕ್ಟರ್ ಪಾಯ್ಸ್ ಮಂಜಲ್ಪಡ್ಪು, ರಶೀದ್ ಮುರ,ಮೌರಿಸ್ ಕುಟಿನ ಜಿಡೆಕಲ್ಲು, ಕಾರ್ಯದರ್ಶಿಗಳಾದ ಇಸ್ಮಾಯಿಲ್ ಬೊಲ್ವಾರ್,ವಾಲ್ಟರ್ ಸಿಕ್ವೆರಾ ಕೊಡಿಜಾಲ್, ದಿವ್ಯ ವಸಂತ ಕೆಮ್ಮಾಯಿ, ಭಾರತಿ ಪ್ರವೀಣ್ ಕೆಮ್ಮಾಯಿ,ಹಮೀದ್ ಸೋಂಪಾಡಿ, ದಿನೇಶ್ ಗೌಡ ಸೇವಿರೆ, ಶಿರಾಜ್ ಸಾಮೆತಡ್ಕ, ನವೀನ್ ಸೇವಿರೆ, ಇಸಾಕ್ ಕೆ ಎಂ ಕರ್ಮಲ, ಕೃಷ್ಣಪ್ಪ ಪೂಜಾರಿ ನೆಕ್ಕರೆ, ಕೆ ಹಮೀದ್ ಮೊಟ್ಟೆತಡ್ಕ, ಅಬ್ದುಲ್ ರಝಕ್ ಜಮಾಲ್, ಹಾಗೂ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಶುಕೂರು ಹಾಜಿ, ಪುತ್ತೂರು ಎನ್ ಎಸ್ ಯುಐ ನೂತನ ಅಧ್ಯಕ್ಷ ಚಿರಾಗ್ ರೈ ಮೇಗಿನ ಗುತ್ತು, ಜಿಲ್ಲಾ ಎನ್ ಎಸ್ ಯುಐ ಪ್ರದಾನ ಕಾರ್ಯದರ್ಶಿ ಬಾತೀಶ ಅಳಕೆಮಜಲು, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೋನ್ ಸಿಕ್ವೆರಾ,ಕಚೇರಿ ಕಾರ್ಯದರ್ಶಿ ಸಿರಿಲ್ ರೋಡ್ರಿಗಸ್,ಮಹಿಳಾ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿ ಸಾಯಿರ ಝುಬೈರ್ ಹಾಗೂ ನಗರ ಸಬಾ ಸದಸ್ಯರಾದ ಇಸುಬು ಕೂರ್ನಡ್ಕ, ರೋಬಿನ್ ತಾವ್ರೋ ಉಪಸ್ಥಿತರಿದ್ದರು.
ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ್ ಭಂಡಾರ್ಕರ್ ಸ್ವಾಗತಿಸಿದರು, ನಗರ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ಕಾಮತ್ ವಂದಿಸಿದರು.