ಮಂಗಳೂರು: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್-ಹರೇಕಳ ಬಳಿ ನೇತ್ರಾವತಿ ನದಿಯಲ್ಲಿ ಶನಿವಾರ ದೋಣಿ ಮಗುಚಿ ಬಿದ್ದು ಓರ್ವ ಕಾರ್ಮಿಕ ನಾಪತ್ತೆಯಾಗಿ ಇನ್ನಿಬ್ಬರು ಪಾರಾಗಿದ್ದಾರೆ.
ಉತ್ತರಪ್ರದೇಶದ ರಾಜ್ (50) ನಾಪತ್ತೆಯಾದವರು.
ಈತ ಇತರ ಇಬ್ಬರು ಕಾರ್ಮಿಕರೊಂದಿಗೆ ದೋಣಿಯಲ್ಲಿ ತೆರಳಿ ಮರಳು ತೆಗೆಯುತ್ತಿದ್ದರು ಎಂದು ತಿಳಿದುಬಂದಿದೆ.