ಪುತ್ತೂರು: ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಕಳೆದ ೧೩ ವರುಷಗಳಿಂದ ಕಾರ್ಯಪ್ರವೃತ್ತರಾಗಿರುವ ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ (ರಿ.)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್‌ನ ೪ನೇ ಶಾಖೆ ಇದೀಗ ಕೊಡಗಿನ ಕುಶಾಲನಗರದ ಕೊಡುಗು ಟವರ್ ನ ಯುನಿಯನ್ ಬ್ಯಾಂಕ್ ಬಿಲ್ಡಿಂಗ್‌ನಲ್ಲಿ ಕನ್ನಿಕಾ ವಿ.ಎಸ್.ಎಸ್.ಎನ್. ಸಹಯೋಗದೊಂದಿಗೆ ಮಾ.24ರಂದು ಹೋಟೆಲ್ ಮತ್ತು ರೆಸಾರ್ಟ್ ಉದ್ದಿಮೆದಾರರ ಸಂಘದ ಜಿಲ್ಲಾಧ್ಯಕ್ಷ ಬಿ ಆರ್ ನಾಗೇಂದ್ರ ಪ್ರಸಾದ್ ರವರು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಹಿರಿಯ ಉಪನ್ಯಾಸಕರು, ಜಿಲ್ಲಾ ತರಬೇತಿ ಶಿಕ್ಷಣ ಕೇಂದ್ರ, ಕೂಡಿಗೆ ಕೆ.ವಿ. ಸುರೇಶ್, ಕುಶಾಲನಗರ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷ ಆರ್.ಕೆ ನಾಗೇಂದ್ರ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಆರ್ ರವಿಕುಮಾರ್, ಕನ್ನಿಕಾ ವಿ.ಎಸ್.ಎಸ್.ಎನ್, ಕುಶಾಲನಗರ ವಹಿಸಿದ್ದರು. ಗೌರವ ಉಪಸ್ಥಿತಿಯನ್ನು ಕುಶಾಲನಗರ ಆರ್‍ಯ ವೈಶ್ಯ ಮಂಡಳಿ ಅಧ್ಯಕ್ಷರಾದ ವಿ.ಪಿ.ನಾಗೇಶ್‌ವಹಿಸಿದ್ದರು.
೫ನೇ ಶಾಖೆಯು ಅತೀ ಶೀಘ್ರದಲ್ಲಿ ಕೊಡಗಿನ ಮಡಿಕೇರಿಯಲ್ಲಿ ಇದೇ ಬರುವ ಎಪ್ರಿಲ್ 3ನೇ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷರು ಪಿ.ವಿ.ಗೋಕುಲ್‌ನಾಥ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರಾಂಶುಪಾಲರಾದ ಕೆ.ಹೇಮಲತಾ ಗೋಕುಲ್‌ನಾಥ್‌ರವರು ಹಾಗೂ ಪ್ರಗತಿಯ ಎಲ್ಲಾ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು