ಪುತ್ತೂರು: ಆರ್ಯಾಪು ಗ್ರಾಮದ ಕಲ್ಲರ್ಪೆ ನಿವಾಸಿ ರಮೇಶ್ ಬಲ್ಯಾಯ ರವರ ಪುತ್ರಿ ಅಕ್ಷತಾ (29) ಜೂ.30 ರಂದು ಅಬುದಾಭಿಯಲ್ಲಿ ಅನಾರೋಗ್ಯದಿಂದಾಗಿ ನಿಧನರಾದರು.

ಅಬುದಾಭಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಕ್ಷತಾ ರವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಜೂ.30 ರಂದು ಕೊನೆಯುಸಿರೆಳೆದಿದ್ದಾರೆ.
ಜು.2 ರಂದು ಅಕ್ಷತಾ ರವರ ಪತಿಯ ಮನೆಯಾದ ಕಾಸರಗೋಡಿನ ಚೇರಂಗೈ ಕಡಪ್ಪುರ ಎಂಬಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಅಕ್ಷತಾ ರವರು ವಿವೇಕಾನಂದ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.
ಮೃತರು ತಂದೆ ರಮೇಶ್ ಬಲ್ಯಾಯ, ತಾಯಿ ಅಂಬಿಕಾ, ಸಹೋದರಿ ಅಂಕಿತಾ, ಪತಿ ಪ್ರಶಾಂತ್ ರನ್ನು ಅಗಲಿದ್ದಾರೆ.