ವಿಟ್ಲ-ಸಾಲೆತ್ತೂರು ರಸ್ತೆಯ ಕರೈ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ 800ಕಾರು ರಸ್ತೆ ಬದಿಯ ಚರಂಡಿಗೆ ಜಿಗಿದು ಪಕ್ಕದ ಮನೆಯ ಆವರಣ ಗೋಡೆಗೆ ಅಪ್ಪಳಿಸಿದ ಘಟನೆ ನಡೆದಿದೆ.

ಅಪಘಾತದ ವೇಳೆ ಚಾಲಕ ಕುದ್ರಿಯ ದಿವ್ಯೇಶ್ ಸೀಟ್ ಬೆಲ್ಟ್ ಧರಿಸದ ಕಾರಣ ಹೊರಕ್ಕೆಸೆಯಲ್ಪಟ್ಟು ಅಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದಾಗಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಸ್ಥಳೀಯರು ಕಾರನ್ನು ಎತ್ತಿ ನಿಲ್ಲಿಸಿದ್ದಾರೆ.




























