ಪುತ್ತೂರು: ಮಳೆಯಿಂದಾಗಿ ಮನೆಯ ಕಂಪೌಂಡ್ ಬಳಿಯ ಮಣ್ಣು ಕುಸಿದು ಹಾನಿಗೊಳಗಾದ ಘಟನೆ ಬಪ್ಪಳಿಗೆ ಕಟ್ಟೆ ಸಮೀಪದ ಎನ್. ಶೆಟ್ಟಿ ಕಂಪೌಂಡ್ ಬಳಿ ನಡೆದಿದೆ.

ಬಪ್ಪಳಿಗೆ ಎನ್. ಶೆಟ್ಟಿ ಕಂಪೌಂಡ್ ನಿವಾಸಿ ಮನೋಜ್ ಕುಮಾರ್ ಶೆಟ್ಟಿ ಎಂಬವರ ಮನೆಯ ಮುಂಭಾಗದ ಕಂಪೌಂಡ್ ಮಣ್ಣು ಕುಸಿದಿದ್ದು, ಮನೆಯೂ ಅಪಾಯದ ಅಂಚಿನಲ್ಲಿದೆ.

ಮನೆಯ ಕಂಪೌಂಡ್ ನ ಬಳಿ ನೀರು ಹರಿಯುವ ಕಣಿ ಇದ್ದು, ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಹರಿಯುವ ಹಿನ್ನೆಲೆ ಕಂಪೌಂಡ್ ಬಳಿಯ ಮಣ್ಣು ಕುಸಿದಿದೆ. ಹೀಗೆಯೇ ಮಳೆ ಮುಂದುವರೆದರೆ ಮನೆಗೂ ಹಾನಿಯಾಗುವ ಸಂಭವವಿದೆ ಎನ್ನಲಾಗುತ್ತಿದೆ.
































