ಉಡುಪಿ: ಉಡುಪಿಯಿಂದ ಮಂಗಳೂರಿಗೆ ಬರುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯನ್ನು ಸುರತ್ಕಲ್ ಬಳಿ ಬಜರಂಗದಳದ ಕಾರ್ಯಕರ್ತರು ತಡೆದು ನಿಲ್ಲಿಸಿದ ಘಟನೆ ನಡೆದಿದೆ. ಹಿಂದೂ ವಿದ್ಯಾರ್ಥಿನಿ ಹಾಗೂ ಅನ್ಯಕೋಮಿನ ಯುವಕ ಅಕ್ಕಪಕ್ಕ ಕೂತು ಸಲುಗೆಯಿಂದ ವರ್ತಿಸುತ್ತಿದ್ದರು ಎನ್ನಲಾಗಿದೆ. ಎಕೆಎಮ್‌ಎಸ್‌ನ ಬಸ್ ಕಂಡಕ್ಟರ್ ಹಾಗೂ ವಿದ್ಯಾರ್ಥಿನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಜಿಲ್ಲೆಯಲ್ಲಿ ಲವ್ ಜಿಹಾದ್ ವಿರುದ್ಧ ಕಳೆದ ಹಲವು ದಿನಗಳಿಂದ ಅನ್ಯಕೋಮಿನ ಜೋಡಿಗಳನ್ನು ಪತ್ತೆಹಚ್ಚಿ ನಿರಂತರವಾಗಿ ಬಜರಂಗದಳ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಲವ್ ಜಿಹಾದ್ ಪ್ರಕರಣ ಕಂಡು ಬಂದರೆ ಮತ್ತೆ ನೇರ ಕಾರ್ಯಾಚರಣೆಯ ನಡೆಸುತ್ತೇವೆ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.