ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ಸಮುದಾಯ ಬಾನುಲಿ ರೇಡಿಯೋ ಪಾಂಚಜನ್ಯ 90.8 ಎಫ್.ಎಂ, ಇನ್ನರ್ ವೀಲ್ ಹಾಗೂ ಮುಳಿಯ ಜ್ಯುವೆಲ್ಸ್ ಸಹಯೋಗದಲ್ಲಿ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ.
ಆಗಸ್ಟ್ 8 ರಂದು ಬೆಳಗ್ಗೆ 9.30 ಗಂಟೆಗೆ ರೇಡಿಯೋ ಪಾಂಚಜನ್ಯದ ಸ್ಟುಡಿಯೋದಲ್ಲಿ ಸ್ಪರ್ಧೆ ಕಾರ್ಯಕ್ರಮ ನಡೆಯಲಿದೆ.
ರಸಪ್ರಶ್ನೆ ಸ್ಪರ್ಧೆಯು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಇರುತ್ತದೆ. ಒಂದು ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳ 2 ತಂಡಕ್ಕೆ ಅವಕಾಶವಿರುತ್ತದೆ.
ನೋಂದಣಿ ಮತ್ತು ವಿವರಗಳಿಗೆ 8050809885 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ. ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ಈ ಸ್ಪರ್ಧೆಯ ಬಹುಮಾನಗಳನ್ನು ಪ್ರಾಯೋಜಿಸಿದೆ.





























