ಈಸ್ಟರ್ ಹಬ್ಬದ ಹಿಂದಿನ ಗುರುವಾರವನ್ನು ಪವಿತ್ರ ಗುರುವಾರ ಎಂದು ಕರೆಯಲಾಗುತ್ತದೆ..ಇದು ಕ್ರಿಶ್ಚಿಯನ್ನರ ಪವಿತ್ರ ದಿನವಾಗಿದ್ದು ಈ ಗುರುವಾರ ಮೊದಲು ಬೀಳುವ ದಿನ ಈಸ್ಟರ್.ಅಂಗೀಕೃತ ಸುವಾರ್ತೆಗಳ ಪ್ರಕಾರ ಶಿಷ್ಯರು ಪಾದ ತೊಳೆದು ಆದರ ಭಾವ ತೋರುವ ನಮೃತಾ ದಿನ ಕೂಡಾ ಇದೇ ಆಗಿದೆ. ಇದರೊಂದಿಗೆ ಯೇಸುಕ್ರಿಸ್ತನ ಕೊನೆಯ ಸಪ್ಪರ್ ನ್ನು ಅಪೋಸ್ತಲರೊಂಧಿಗೆ ಸ್ಮರಿಸಲಾಗುತ್ತದೆ.

ಈ ದಿನ ಕ್ರೈಸ್ತ ಬಾಂಧವರ ಮನೆ ಮನದಲ್ಲಿ ಪಾವಿತ್ರ್ಯತೆಯ ಜತೆಗೆ ಚರ್ಚುಗಳಲ್ಲೂ ದೇವಕಾರ್ಯಗಳು ನಡೆದು ಬರುತ್ತದೆ, ಅಂತೆಯೇ ಪುತ್ತೂರಿನ ಚರ್ಚಿನಲ್ಲಿ ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಸರಳ ಸಪ್ಪರ್ ಆಫ್ ಜೀಸಸ್ ಕ್ರೈಸ್ಟ್ ಆಚರಿಸಲಾಗುತ್ತದೆ.. ಇಲ್ಲಿ ಕೂಡಾ ಚರ್ಚಿನ ಫಾದರ್ ತಮ್ಮ ಶಿಷ್ಯರ ಪಾದ ತೊಳೆಯುವ ಮೂಲಕ ಧರ್ಮತತ್ವ ಸಂದೇಶವ ಸಾರುತ್ತಿದ್ದು, ಈ ಬಾರಿಯೂ ಪವಿತ್ರ ದಿನದ ಆಚರಣೆಯನ್ನು ಸರಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಸರಳವಾಗಿ ಆಚರಿಸಲಾಗುತ್ತದೆ ಎಂದು ಈ ಮೂಲಕ ತಿಳಿಸಿರುತ್ತಾರೆ.
