ಕಾಲ ಬದಲಾದಂತೆ ಜನರು ತಮ್ಮ ಜೀವನ ಕ್ರಮವನ್ನು ಅದಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ, ಹೊಸ ಹೊಸ ಅನ್ವೇಷಣೆ, ಹೊಸ ಹೊಸ ವಿಷಯಗಳ ಬಗ್ಗೆ ಸಂಶೋಧನೆ ಮಾಡುವುದು, ದೇಶ ಸುತ್ತುವುದು, ಜನ ಜಾಗೃತಿ ಮೂಡಿಸುವುದು ಹೀಗೆ ಹತ್ತು ಹಲವು. ಅದೇ ರೀತಿ ಕೇರಳದ ಯುವಕನೊಬ್ಬ ಸ್ಕೇಟಿಂಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.
ಕೇರಳದ ಅನಾಸ್ ಹಜಾಸ್ ಎಂಬ ಯುವಕ ಸ್ಕೇಟಿಂಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸ್ಕೇಟಿಂಗ್ ಮೂಲಕ ಹೊರಟಿದ್ದ ಯುವಕ ಹರ್ಯಾಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

ಕೇರಳದ 31 ವರ್ಷದ ಅನಾಸ್ ಕಳೆದ ಮೇ 29 ರಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3,700 ಕಿ. ಮೀ. ಯಾತ್ರೆಯನ್ನು ಸ್ಕೇಟಿಂಗ್ ಮೂಲಕ ನಡೆಸಲು ನಿರ್ಧರಿಸಿದ್ದರು ಅದರಂತೆ ಮೇ 29 ರಂದು ಕನ್ಯಾಕುಮಾರಿಯಿಂದ ಹೋರಾಟ ಯಾತ್ರೆ ಸುಗಮವಾಗಿ ನಡೆಯಿತು ತನ್ನ ಪಯಣದ ವಿಡಿಯೋಗಳನ್ನು ಅನಾಸ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದರು ಆದರೆ ಅನಾಸ್ ಯಾವ ಉದ್ದೇಶಕ್ಕೆ ಹೊರಟಿದ್ದಾರೋ ಆ ಕೆಲಸ ಮಾತ್ರ ಪೂರ್ಣಗೊಳ್ಳಲಿಲ್ಲ ಇನ್ನೇನು ಕಾಶ್ಮೀರಕ್ಕೆ ೬೦೦ ಕಿ. ಮೀ ಮಾತ್ರ ಬಾಕಿ ಇರುವಾಗಲೇ ಯಮನ ರೂಪದಲ್ಲಿ ಬಂದ ಟ್ರಕ್ ಅನಾಸ್ ಗೆ ಡಿಕ್ಕಿ ಹೊಡೆದಿದೆ ಗಂಭೀರ ಗಾಯಗೊಂಡ ಯುವಕನನ್ನು ಕೂಡಲೇ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು ಆದರೆ ಅಷ್ಟೋತ್ತಿಗಾಗಲೇ ಅನಾಸ್ ನ ಜೀವ ಹೋಗಿತ್ತು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.
ಅನಾಸ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಮುಗಿಸಿದ ನಂತರ ತಿರುವನಂತಪುರಂನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಹೊಸ ಸ್ಕೇಟಿಂಗ್ ಬೋರ್ಡ್ ಕೊಂಡಿದ್ದರು ಅಲ್ಲದೆ ಕಾಶ್ಮೀರ ಯಾತ್ರೆ ಬಳಿಕ ಇನ್ನು ಹಲವು ಯಾತ್ರೆಗಳ ಯೋಚನೆಯನ್ನು ಮಾಡಿದ್ದರು ಎನ್ನಲಾಗಿದೆ.