ನವದೆಹಲಿ: ಹಗಲು-ರಾತ್ರಿ, ಚಳಿ, ಬಿಸಿಲು, ಗಾಳಿ ಮಳೆ ಎನ್ನದೆ ದೇಶ ಕಾಯೋ ಯೋಧರಿಗಾಗಿ ಲೈಟ್ ವೇಯ್ಟ್ ಬುಲೆಟ್ ಪ್ರೂಫ್ ಜಾಕೆಟ್ಗಳು ಬರಲಿವೆ. ಆತ್ಮನಿರ್ಭರ್ ಯೋಜನೆಯಡಿ ಹಗುರ ಬುಲೆಟ್ ಪ್ರೂಫ್ ಜಾಕೆಟ್ಗಳನ್ನ ತಯಾರಿಸಲಾಗಿದೆ.
ಮೊದಲು 10.4 ಕೆ.ಜಿ ಇರೋ ಬುಲೆಟ್ ಪ್ರೂಫ್ ಜಾಕೆಟ್ಗಳನ್ನ ಯೋಧರಿಗೆ ಕೊಡಲಾಗ್ತಿತ್ತು. ಇದೀಗ 9 ಕೆ.ಜಿ ತೂಕದ ಬುಲೆಟ್ ಪ್ರೂಫ್ ಜಾಕೆಟ್ಗಳನ್ನ ತಯಾರಿಸಲಾಗಿದೆ. ಕಾನ್ಪುರ್ನಲ್ಲಿರೋ ಡಿಆರ್‌ಡಿಒ ಲ್ಯಾಬ್ DMSRDEನಲ್ಲಿ ಈ ಬುಲೆಟ್ ಪ್ರೂಫ್ ಜಾಕೆಟ್‍ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಫ್ರಂಟ್ ಹಾರ್ಡ್ ಆರ್ಮರ್ ಪ್ಯಾನೆಲ್ ಜಾಕೆಟನ್ನು ಚಂಡೀಘಡದ ಟಿಬಿಆರ್ಎಲ್ನಲ್ಲಿ ಪರೀಕ್ಷಿಸಲಾಗಿದ್ದು, ಯಶಸ್ವಿಯಾಗಿದೆ. ಬಿಐಎಸ್ ಮಾನದಂಡಗಳಿಗೆ ಈ ಜಾಕೆಟ್ ಅನುಗುಣವಾಗಿದೆ ಎಂದು ಡಿಆರ್‌ಡಿಓ ಮಾಹಿತಿ ನೀಡಿದೆ. ಹಗುರವಾದ ಗುಂಡು ನಿರೋಧಕ ಜಾಕೆಟ್ ತಯಾರಿಸುವ ಮೂಲಕ ಸೈನಿಕರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟ ಡಿಆರ್‌ಡಿಓ ವಿಜ್ಞಾನಿಗಳನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.