ಪುತ್ತೂರು: ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು, ಪಾಣಾಜೆ ಇದರ ಆಶ್ರಯದಲ್ಲಿ ನಡೆಯುವ 16 ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆಯನ್ನು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಬಿಡಗಡೆ ಗೊಳಿಸಲಾಯಿತು.

ಆಮಂತ್ರಣ ಪತ್ರಿಕೆಯನ್ನು ಶ್ರೀಶಾರದೋತ್ಸವ ಸಮಿತಿ ಆರ್ಲಪದವು ಇದರ ಗೌರವದ್ಯಕ್ಷರಾದ ಸದಾಶಿವ ರೈ ಸೂರಂಬೈಲ್ ರವರು ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಪ್ರಕಾಶ್ ಕುಲಾಲ್,ಪ್ರ ಕಾರ್ಯದರ್ಶಿ ಮೋಹನ ಬೊಳ್ಳುಕಲ್ಲು, ಗೌರವಾಧ್ಯಕ್ಷರಾದ ಬಾಲಕೃಷ್ಣ ಪೂಜಾರಿ,ವಿದ್ಯಾಶ್ರೀ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಉಪಾಧ್ಯಕ್ಷರಾದ ಭರತೇಶ್ ರಾವ್,ಗ್ರಾ.ಪಂ ಸದಸ್ಯರಾದ ಕೃಷ್ಣಪ್ಪ ಪೂಜಾರಿ,ಹರೀಶ್ ಕುಲಾಲ್, ಸಂತೋಷ್ ರೈ ಕೋಟೆ ಹಾಗೂ ಯಾದವ ಸಭಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಧನಂಜಯ ಮಣಿಯಾಣಿ,ಕೋಶಾಧಿಕಾರಿ ಶಿವರಾಮ ಮಣಿಯಾಣಿ, ಗೋಪಾಲ ಮಣಿಯಾಣಿ, ರಾಮಚಂದ್ರ ಮಣಿಯಾಣಿ, ಶಿವರಾಮ ಮಣಿಯಾಣಿ ಸುಡುಕ್ಕುಳಿ, ಸುಶಾಂತ್ ಮಣಿಯಾಣಿ, ಶ್ರೀಹರಿ ಪಾಣಾಜೆ, ದಿನೇಶ್ ಯಾದವ್ ಉಪಸ್ಥಿತರಿದ್ದರು.
























