ಪುತ್ತೂರು: ವಿಟ್ಲದಿಂದ ನಾಪತ್ತೆಯಾಗಿದ್ದ ಅವಿವಾಹಿತ ಯುವಕ ಪುತ್ತೂರಿನಲ್ಲಿ ಪತ್ತೆಯಾಗಿದ್ದಾನೆ.
ಪುಣಚ ಅಜೇರುಮಜಲು ನಿವಾಸಿ ಬಾಲಕೃಷ್ಣ(39) ನಾಪತ್ತೆಯಾಗಿದ್ದು, ಇಂದು ಪುತ್ತೂರಿನಲ್ಲಿ ಪತ್ತೆಯಾಗಿದ್ದಾನೆ.

ಪುತ್ತೂರು ಬಸ್ ನಿಲ್ದಾಣದಲ್ಲಿ ತನ್ನ ಬಾಗ್ ಕಳೆದು ಹೋಗಿದೆ ಎಂದು ದೂರು ನೀಡಲು ಬಂದ ವೇಳೆ ಪೊಲೀಸರು ಆತನನ್ನು ಗುರುತು ಹಿಡಿದಿದ್ದಾರೆ.ವಿಚಾರಣೆ ಬಳಿಕ ಮನೆಯವರ ಜೊತೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.