ಕಡಬ: ಎರಡು ನಂಬರ್ ಪ್ಲೇಟ್ ಹೊಂದಿರುವ ಅಪರಿಚಿತ ಓಮ್ನಿ ಕಾರೊಂದು ಮರ್ದಾಳದಲ್ಲಿ ಕಂಡುಬಂದಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮುಂಭಾಗದಲ್ಲಿ ಮತ್ತುಹಿಂಭಾಗದಲ್ಲಿ ಬೇರೆ ಬೇರೆ ನಕಲಿ ನಂಬರ್ ಪ್ಲೇಟ್ ಗಳನ್ನು ಹಾಕಲಾಗಿದ್ದು, ಬುಧವಾರ ರಾತ್ರಿ ಕಡಬ ಠಾಣಾ ಪೊಲೀಸರು ಮರ್ದಾಳ ಪೇಟೆಯಲ್ಲಿ ಕಾರಿನ ಚಕ್ರಗಳಿಗೆ ಲಾಕ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ, ನಕಲಿ ನಂಬರ್ ಪ್ಲೇಟ್ ಹಾಕಿರುವ ಕಾರಿಗೆ ಲಾಕ್ ಮಾಡಲಾಗಿದ್ದು, ಕಾರಿನ ಮಾಲಕರನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
























