ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರವೀಣ್ ಹತ್ಯೆಗೈದು ಪ್ರಮುಖ ಮೂವರು ಆರೋಪಿಗಳು ಕೇರಳಕ್ಕೆ ಪರಾರಿಯಾಗಿದ್ದರು. ಆ ಬಳಿಕ ಪೊಲೀಸರು ಆರೋಪಿಗಳ ಪತ್ತೆಗಾಗಿ ಕೇರಳದಲ್ಲಿ ಬೀಡುಬಿಟ್ಟಿದ್ದರು. ಇದೀಗ ಕೇರಳದಲ್ಲಿ ಮೂವರು ಆರೋಪಿಗಳಾದ ಶಿಯಾಬ್(33), ರಿಯಾಝ್ (27), ಬಶೀರ್(29) ಎಂಬಾತನನ್ನು ಬಂಧಿಸಲಾಗಿದೆ.

ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಮೂರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಹಿನ್ನೆಲೆ ಬಂಧಿತರ ಸಂಖ್ಯೆ 10ಕ್ಕೇರಿದೆ.
ಪ್ರವೀಣ್ ಹತ್ಯೆ ಪ್ರಕರಣದ ಆರೋಪಿಗಳ ವಿವರ:
- ಸುಳ್ಯ ನಾವೂರು ನಿವಾಸಿ ಅಬೀದ್(22),
- ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್(28),
- ಬೆಳ್ಳಾರೆ ಪಲ್ಲಿಮಜಲು ನಿವಾಸಿ ಸದ್ದಾಂ (32)
- ಬೆಳ್ಳಾರೆ ಪಲ್ಲಿಮಜಲು ನಿವಾಸಿ ಹಾರಿಸ್ (42),
- ಝಾಕೀರ್ ಸವಣೂರು (29),
- ಶಫೀಕ್ ಬೆಳ್ಳಾರೆ (27),
- ಸುಳ್ಯ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ (33),
- ಸುಳ್ಯದ ಶಿಯಾಬ್(33),
- ಅಂಕತ್ತಡ್ಕ ನಿವಾಸಿ ರಿಯಾಝ್ (27),
- ಎಲಿಮಲೆ ನಿವಾಸಿ ಬಶೀರ್(29
15 ದಿನಗಳ ಬಳಿಕ ಆರೋಪಿಗಳನ್ನು ಖೆಡ್ಡಾಗೆ ಕೆಡವಿದ ಪೊಲೀಸರು..!!
ಪ್ರವೀಣ್ ಹತ್ಯೆ ನಡೆದು 15 ದಿನಗಳ ಬಳಿಕ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರವೀಣ್ ಹತ್ಯೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮರಾ ಹಾಗೂ ಇತರ ಸಾಕ್ಷಾಧಾರಗಳು ಸಿಗದ ಹಿನ್ನೆಲೆ ಈ ಪ್ರಕರಣ ಪೊಲೀಸರಿಗೆ ಬಹಳ ಕಗ್ಗಂಟ್ಟಾಗಿತ್ತು. ಪ್ರಕರಣ ತನಿಖೆ ನಡೆಸಲು ಆರು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೊದಲಿಗೆ ಶಫೀಕ್ ಮತ್ತು ಜಾಕೀರ್ ನನ್ನು ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸಿದ ನಂತರ ಅವರು ನೀಡಿದ ಮಾಹಿತಿ ಅನ್ವಯ ಮತ್ತೆ ಬೆಂಗಳೂರಿನಲ್ಲಿ ಇಬ್ಬರನ್ನು ಅರೆಸ್ಟ್ ಮಾಡಲಾಗಿತ್ತು. ತದ ನಂತರ ಅಭಿದ್, ನೌಫಲ್ ನನ್ನು ಬಂಧಿಸಿದ್ದರು. ಅಬ್ದುಲ್ ಕಬೀರ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದ ನಂತರ ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಆರೋಪಿಗಳಿಗೆ ತಲೆಮರೆಸಿ ಕೊಳ್ಳಲು ಯಾರೂ ಸಹಕಾರ ನೀಡಿದ್ದಾರೆ. ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಯಾಕೇ ಪ್ರವೀಣ್ ರನ್ನೇ ಟಾರ್ಗೆಟ್ ಮಾಡಿದ್ರು, ಯಾಕೇ ಹತ್ಯೆ ಮಾಡಿದ್ರೂ ಎಂಬ ಮಾಹಿತಿ ಆರೋಪಿಗಳ ಹೆಚ್ಚಿನ ವಿಚಾರಣೆಯ ನಂತರವಷ್ಟೇ ತಿಳಿಯಬೇಕಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೇ ಹಾಜರು ಪಡಿಸಿದ ನಂತರ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ಈ ಬಗ್ಗೆ ಸಂಪೂರ್ಣವಾಗಿ ವಿಚಾರಣೆ ನಡೆಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ರವರು ಮಾಹಿತಿ ನೀಡಿದ್ದಾರೆ.
ಇವರಿಗೆ ಹಳೆ ಮೇಜರ್ ಕೇಸ್ ಗಳು ಇಲ್ಲ. ಇವರಿಗೆ ಪಿ.ಎಫ್.ಐ ಲಿಂಕ್ ಇದೆ. ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹತ್ಯೆ ಮಾಡಿದ ಬಳಿಕ ಆರೋಪಿಗಳು
ಕಾಸರಗೋಡಿನ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಆ ಬಳಿಕ ಎಲ್ಲಿಗೆ ತೆರಳಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿಗಳು ಬ್ಲ್ಯಾಕ್ ಕಲರ್ ಸ್ಪ್ಲೆಂಡರ್ ಬೈಕ್ ನಲ್ಲಿ ಬಂದು ಪ್ರವೀಣ್ ಹತ್ಯೆ ಮಾಡಿದ್ದಾರೆ. ಒಟ್ಟು ಆರು ವಾಹನಗಳನ್ನು ಈ ಕೃತ್ಯಕ್ಕೆ ಬಳಸಲಾಗಿದೆ. ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ ಉಪಕರಣಗಳನ್ನು ಎಲ್ಲಿ ಬಚ್ಚಿಟ್ಟಿದ್ದಾರೆ ಎಂಬುದನ್ನು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಮುಂದಕ್ಕೆ ಪತ್ತೆ ಹಚ್ಚಲಿದ್ದೇವೆ. ಆರೋಪಿಗಳಿಗೆ ಯಾರೆಲ್ಲಾ ಆಶ್ರಯ, ಸಹಕಾರ ನೀಡಿದ್ದಾರೆ ಎಂಬುದನ್ನೂ ಪತ್ತೆ ಹಚ್ಚಲಿದ್ದೇವೆ. ಬಂಧಿತ ಮೂರು ಪ್ರಮುಖರ ವಿಚಾರಣೆಯ ಬಳಿಕ ಪ್ರಕರಣವನ್ನು ಎನ್.ಐ.ಎಗೆ ಹಸ್ತಾಂತರಿಸುತ್ತೇವೆ. ಎಲ್ಲಾ ಮಾಹಿತಿಗಳನ್ನು ಪೊಲೀಸ್ ಇಲಾಖೆ ವತಿಯಿಂದ ಎನ್.ಐ.ಎ. ನೀಡಲಾಗುವುದು ನಂತರದ ತನಿಖೆಯನ್ನು ಎನ್. ಐ.ಎ. ಅವರು ಮುಂದುವರೆಸುತ್ತಾರೆ ಎಂದು ಅವರು ಹೇಳಿದ್ದಾರೆ.
ಸ್ಥಳೀಯರಿಂದಲೇ ಹತ್ಯೆ ಸ್ಕೆಚ್..!!
ಪ್ರವೀಣ್ ಹತ್ಯೆಗೆ ಸ್ಥಳೀಯರೇ ಸ್ಕೆಚ್ ರೂಪಿಸಿದ್ದು, ಪ್ರವೀಣ್ ರವರ ಚಲನವಲನಗಳನ್ನು ಗಮನಿಸಿ, ರಾತ್ರಿ ಯಾರೂ ಇಲ್ಲದ ವೇಳೆ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.