ಬನ್ನೂರು: ಪಡೀಲ್ ಫ್ರೆಂಡ್ಸ್ ವತಿಯಿಂದ ಆಶ್ರಯದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಿತು.
ಪಡೀಲ್‌ನಲ್ಲಿ 113 ವರ್ಷದ ಹಿರಿಯರಾದ ಚೆನ್ನು ಮೊಗೇರ ಆನೆಮಜಲು ರವರು ಧ್ವಜಾರೋಹಣ ನೆರವೇರಿಸಿದರು.

ಚೆನ್ನು ಮೊಗೇರ ಆನೆಮಜಲು ಮತ್ತು ಪಿಲಿ ರಾಧಣ್ಣರವರಿಗೆ ಫ್ರೆಂಡ್ಸ್ ಪಡೀಲ್ ವತಿಯಿಂದ ಸನ್ಮಾನ ಮಾಡಲಾಯಿತು. ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಗೌರಿ ಬನ್ನೂರು, ಲೀಲಾವತಿ ಕೃಷ್ಣನಗರ, ಕವಿತಾ ದಿನಕರ್, ಶಾರದಾ ಕೇಶವ್ , ಕೇಶವ್ ನಾಯ್ಕ್, ಪದ್ಮನಾಭ ನಾಯ್ಕ್ ಮತ್ತು ಫ್ರೆಂಡ್ಸ್ ಪಡೀಲ್ ಸದಸ್ಯರು ಉಪಸ್ಥಿತರಿದ್ದರು.


























