ಬೆಳ್ತಂಗಡಿ: ಹಿಂದೂ ಜಾಗರಣ ವೇದಿಕೆ ಉಜಿರೆ ತಾಲೂಕು ಕೊಕ್ಕಡ ವಲಯದ ವತಿಯಿಂದ ‘ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ’ ನಡೆಯಿತು.

ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಬಿ.ಎಮ್‌ಎಸ್.ನ ತಾಲೂಕು ಅಧ್ಯಕ್ಷರು ನ್ಯಾಯವಾದಿಗಳಾದ ಉದಯ್ ರವರು ನೆರವೇರಿಸಿದರು.

ಕೊಕ್ಕಡ ಶ್ರೀ ರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಕುಶಾಲಪ್ಪ ಗೌಡ ರವರು ಮೆರವಣಿಗೆಗೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಕ್ಕಡ ಹಿಂದೂ ಜಾಗರಣ ವೇದಿಕೆ ಮಾಜಿ ವಲಯ ಅಧ್ಯಕ್ಷರಾದ ವೇದಮೂರ್ತಿ ಬಾಲಕೃಷ್ಣ ಕೆದಿಲಾಯ ರವರು ವಹಿಸಿದ್ದರು.

ಈ ಸಂದರ್ಭದಲ್ಲಿ ಕುಶಾಲಪ್ಪ ಗೌಡ ಪೂವಾಜೆ, ಹಿರಿಯ ಸ್ವಯಂ ಸೇವಕರಾದ ವಿಠಲ ಭಂಡಾರಿ, ಬೆಳ್ತಂಗಡಿ ಪ್ರಖಂಡದ ವಿ.ಹಿಂ.ಪ ತಾಲೂಕು ಪ್ರಮುಖ ಅಖಿಲ್ ರೇಖ್ಯಾ, ಹಿಂ.ಜಾ.ವೇ ಜಿಲ್ಲಾ ಸಮಿತಿ ಸದಸ್ಯ ರೂಪೇಶ್ ಶಿಶಿಲ, ವಿನಯ ಕೇಚೋಡಿ, ಹಿಂ.ಜಾ.ವೇ ಉಜಿರೆ ತಾಲೂಕು ಸಹ ಸಂಯೋಜಕ್ ಸಚಿನ್ ಬಜ, ತಾಲೂಕು ಸಮಿತಿ ಸದಸ್ಯ ಯತೀಶ್ ಬೇರಿಕೆ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗಿಶ್ ಆಲಂಬಿಲ ಸ್ವಾಗತಿಸಿ, ಕೇಶವ ಹಲ್ಲಿಂಗೇರಿ ಕಾರ್ಯಕ್ರಮ ನಿರೂಪಿಸಿದರು.


























