ವಿಟ್ಲ : ಕಳೆದ ಮೂವತ್ತು ವರ್ಷಗಳಿಂದ ಆಟೋ ಚಾಲಕರಾಗಿ ಸೇವೆ ನೀಡುತ್ತಿದ್ದ ಕೊಡಪದವು ಸಮೀಪದ ದಿವಾಣ ಶಿವರಾಮ ನಾಯ್ಕ (52) ಹೃದಯಾಘಾತದಿಂದ ಆ.16 ರಂದು ನಿಧನರಾದರು.
ತುಸು ಎದೆ ನೋವು ಕಾಣಿಸಿದ ಕಾರಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾದರು.
ಮೃತರು ಆಟೋ ಚಾಲಕರಾಗಿದ್ದು ವಿಟ್ಲದ ಖಾಸಗಿ ಶಾಲೆಗಳಿಗೆ ತಮ್ಮ ಪರಿಸರದ ಪುಟಾಣಿಗಳು ಕರೆದೊಯ್ಯುತ್ತಿದ್ದರು ಹಾಗೂ ವಿಟ್ಲ ಭಾಗದಲ್ಲಿ ಹಲವರಿಗೆ ಚಿರ ಪರಿಚಿತರಾಗಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.