Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ

    ಪುತ್ತೂರಿನ ಹೆಸರಿಗೆ ಕಳಂಕ ಬೇಡ, ಸತ್ಯ ಹೊರಬರಲಿ: ಟಿಕೆಟ್ ಹಂಚಿಕೆ ವಿವಾದದ ಸಮಗ್ರ ತನಿಖೆಗೆ ಅರುಣ್ ಕುಮಾರ್ ಪುತ್ತಿಲ ಆಗ್ರಹ..!!

    ಐಷಾರಾಮಿ ಜೀವನಕ್ಕಾಗಿ ಬೈಕ್ ಕಳವು : 7 ಮಂದಿ ವಶಕ್ಕೆ; ₹4.50 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳ ವಶ.!!

    ಐಷಾರಾಮಿ ಜೀವನಕ್ಕಾಗಿ ಬೈಕ್ ಕಳವು : 7 ಮಂದಿ ವಶಕ್ಕೆ; ₹4.50 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳ ವಶ.!!

    ಸ್ಟಿಂಗ್​ ಆಪರೇಷನ್​​ ಪ್ರಕರಣ: ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ..!

    ಸ್ಟಿಂಗ್​ ಆಪರೇಷನ್​​ ಪ್ರಕರಣ: ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ..!

    ಪುತ್ತೂರು: ಪಿಯುಸಿ ವಿದ್ಯಾರ್ಥಿ ನಾಪತ್ತೆ..!

    ಪುತ್ತೂರು: ಪಿಯುಸಿ ವಿದ್ಯಾರ್ಥಿ ನಾಪತ್ತೆ..!

    ಲಾರಿ-ಕಾರು ಡಿಕ್ಕಿ: ಬಾಲಕ ಸಾವು; ಹಲವರಿಗೆ ಗಂಭೀರ ಗಾಯ..!!

    ಲಾರಿ-ಕಾರು ಡಿಕ್ಕಿ: ಬಾಲಕ ಸಾವು; ಹಲವರಿಗೆ ಗಂಭೀರ ಗಾಯ..!!

    ವಿಟ್ಲ ಪುಚ್ಚೆಗುತ್ತು ನಿವಾಸಿಗಳಿಗೆ 94 ಸಿ ಹಕ್ಕು ಪತ್ರ ಕೊಡಿಸಿದ ಶಾಸಕ ಅಶೋಕ್ ರೈ : ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಫಲಾನುಭವಿಗಳು..!

    ವಿಟ್ಲ ಪುಚ್ಚೆಗುತ್ತು ನಿವಾಸಿಗಳಿಗೆ 94 ಸಿ ಹಕ್ಕು ಪತ್ರ ಕೊಡಿಸಿದ ಶಾಸಕ ಅಶೋಕ್ ರೈ : ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಫಲಾನುಭವಿಗಳು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಪುತ್ತೂರಿನ ಹೆಸರಿಗೆ ಕಳಂಕ ಬೇಡ, ಸತ್ಯ ಹೊರಬರಲಿ: ಟಿಕೆಟ್ ಹಂಚಿಕೆ ವಿವಾದದ ಸಮಗ್ರ ತನಿಖೆಗೆ ಅರುಣ್ ಕುಮಾರ್ ಪುತ್ತಿಲ ಆಗ್ರಹ..!!

October 25, 2026
in Featured, ಕ್ರೈಮ್, ಪುತ್ತೂರು
0
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ತನ್ನದೇ ಆದ ರಾಜಕೀಯ ಇತಿಹಾಸವಿದೆ. ಸ್ವಾಭಿಮಾನಿ ಮತದಾರರು, ರಾಜಕೀಯ ಜಾಗೃತಿ ಮತ್ತು ಹೋರಾಟದ ಪರಂಪರೆಯನ್ನು ಹೊಂದಿರುವ ಪುತ್ತೂರು ಇಂದು ಟಿಕೆಟ್ ಹಂಚಿಕೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಸುದ್ದಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಪುತ್ತೂರಿನ ರಾಜಕೀಯ ಘನತೆಗೆ ಧಕ್ಕೆ ತರುವಂತಹ ಯಾವುದೇ ಬೆಳವಣಿಗೆ ನಡೆದಿದ್ದರೆ, ಅದರ ಸತ್ಯಾಸತ್ಯತೆ ಜನರ ಮುಂದೆ ಬರಲೇಬೇಕು ಎಂದು ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.

Advertisement

ಪಕ್ಷದ ಟಿಕೆಟ್ ಪಡೆಯುವುದು ರಾಜಕೀಯ ಪಕ್ಷಗಳ ಆಂತರಿಕ ಪ್ರಕ್ರಿಯೆ. ಅದನ್ನು ಮೀರಿಯೂ ನಡೆಯುತ್ತದೆ. ಇದು ಪಕ್ಷಗಳ ಸೋಲಿಗೆ ಕಾರಣವೂ ಆಗಿರುತ್ತದೆ. ಆದರೆ, ಆ ಪ್ರಕ್ರಿಯೆಯ ಬಗ್ಗೆ ಗಂಭೀರ ಅನುಮಾನಗಳು ಮೂಡಿದಾಗ ಅವುಗಳಿಗೆ ಸ್ಪಷ್ಟನೆ ನೀಡುವುದು ಸಂಬಂಧಪಟ್ಟವರ ಜವಾಬ್ದಾರಿ. ಕಾರ್ಯಕರ್ತರ ಬೆಂಬಲ, ಜನರ ವಿಶ್ವಾಸ ಮತ್ತು ಪಕ್ಷದ ಸಂಘಟನಾತ್ಮಕ ಶಕ್ತಿಗಿಂತ ಬೇರೆ ಯಾವುದಾದರೂ ಪ್ರಭಾವಗಳು ಟಿಕೆಟ್ ನಿರ್ಧಾರದಲ್ಲಿ ಪಾತ್ರವಹಿಸಿವೆಯೇ ಎಂಬ ಪ್ರಶ್ನೆಗಳಿಗೆ ಊಹಾಪೋಹಗಳ ಮೂಲಕವಲ್ಲ, ಪಾರದರ್ಶಕ ತನಿಖೆಯ ಮೂಲಕ ಉತ್ತರ ಸಿಗಬೇಕು ಎಂದು ಅರುಣ್‌ ಕುಮಾರ್‌ ಪುತ್ತಿಲ ಹೇಳಿದ್ದಾರೆ.

Advertisement

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಒಳಗೊಂಡ ಸ್ಟಿಂಗ್ ಆಪರೇಷನ್ ಪ್ರಕರಣದ ಸುತ್ತ ಕೇಳಿಬರುತ್ತಿರುವ ಹೇಳಿಕೆಗಳು ಹಾಗೂ ಆರೋಪಗಳು ಪುತ್ತೂರಿನ ರಾಜಕೀಯದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿವೆ. 2011 ರಲ್ಲಿ ನಡೆದಿತ್ತು ಎನ್ನಲಾದ ಘಟನೆ ಮತ್ತು 2023 ರ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ನಡುವೆ ಸಂಬಂಧವಿದೆ ಎಂಬ ಆರೋಪಗಳ ಸತ್ಯಾಸತ್ಯತೆ ಪರಿಶೀಲನೆಯಾಗಬೇಕು. ಪುತ್ತೂರಿನ ಹಾಲಿ ಶಾಸಕರಿಗೆ ಟಿಕೆಟ್ ದೊರೆತ ಪ್ರಕ್ರಿಯೆಯ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಮೂಡಿರುವುದರಿಂದ, ಈ ಎಲ್ಲ ವಿಚಾರಗಳಿಗೆ ಸ್ಪಷ್ಟತೆ ದೊರೆಯುವುದು ಅಗತ್ಯವಾಗಿದೆ.

ಇದು ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ಆರೋಪ ಮಾಡುವುದಲ್ಲ. ರಾಜಕೀಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇದೆಯೇ ಎಂಬುದು ಬಹಳ ಅಗತ್ಯವಾಗಿದೆ. ಈಗ ಇರುವ ಗಂಭೀರ ಆರೋಪಗಳನ್ನು ನಿರ್ಲಕ್ಷಿಸುವುದೂ ಸರಿಯಲ್ಲ. ಸಂಬಂಧಪಟ್ಟ ದಾಖಲೆಗಳು, ಲಭ್ಯವಿರುವ ಸಾಕ್ಷ್ಯಗಳು ಮತ್ತು ಎಲ್ಲರ ಹೇಳಿಕೆಗಳನ್ನು ಪರಿಶೀಲಿಸಿ, ನಿಷ್ಪಕ್ಷಪಾತ ತನಿಖೆಯ ಮೂಲಕ ಸತ್ಯವನ್ನು ಹೊರತರುವುದು ಅಗತ್ಯವಾಗಿದೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಪಕ್ಷಗಳ ನಡುವೆ ಸ್ಪರ್ಧೆಯೂ ಸಹಜ. ಆದರೆ, ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಪುತ್ತೂರಿನ ಹೆಸರಿಗೆ ಅನಗತ್ಯ ಕಳಂಕ ತರುವ ಪರಿಸ್ಥಿತಿ ನಿರ್ಮಾಣವಾಗಬಾರದು. ಪುತ್ತೂರಿನ ಜನರು ತಮ್ಮ ಮತದಾನದ ಹಕ್ಕನ್ನು ಸ್ವಾಭಿಮಾನದಿಂದ ಚಲಾಯಿಸುವವರು. ಅವರ ತೀರ್ಮಾನವನ್ನು ಗೌರವಿಸುವುದು ಮತ್ತು ರಾಜಕೀಯ ನಿರ್ಧಾರಗಳ ಬಗ್ಗೆ ಅವರಿಗೆ ಸ್ಪಷ್ಟತೆ ದೊರೆಯುವಂತೆ ಮಾಡುವುದು ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ ಎಂದು ಪುತ್ತಿಲ ಹೇಳಿದ್ದಾರೆ.

ರಾಜಕೀಯದಲ್ಲಿ ಯಾರೂ ಪ್ರಶ್ನಾತೀತರಲ್ಲ. ಯಾರೂ ತನಿಖೆಗೂ ಮೀರಿದವರಲ್ಲ. ಆರೋಪಗಳು ಯಾರ ವಿರುದ್ಧ ಕೇಳಿಬಂದರೂ, ಅವರ ಸ್ಥಾನಮಾನ ಅಥವಾ ರಾಜಕೀಯ ಪ್ರಭಾವವನ್ನು ಲೆಕ್ಕಿಸದೆ ಸತ್ಯಾಸತ್ಯತೆ ಪರಿಶೀಲನೆಯಾಗಬೇಕು. ತಪ್ಪು ಸಾಬೀತಾದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಪುತ್ತೂರಿನ ರಾಜಕೀಯವನ್ನು ವೈಯಕ್ತಿಕ ಆರೋಪ-ಪ್ರತ್ಯಾರೋಪಗಳ ಮಟ್ಟಕ್ಕೆ ಇಳಿಸುವುದೂ ಉದ್ದೇಶವಲ್ಲ. ಜನರ ವಿಶ್ವಾಸವೇ ರಾಜಕೀಯದ ನಿಜವಾದ ಶಕ್ತಿ. ಆ ವಿಶ್ವಾಸಕ್ಕೆ ಧಕ್ಕೆ ತರುವಂತಹ ಅನುಮಾನಗಳು ಮೂಡಿದಾಗ ಸತ್ಯ ಹೊರಬರಬೇಕೆಂದು ಆಗ್ರಹಿಸುವುದು ಅಗತ್ಯವಾಗಿದೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದು ಅರುಣ್‌ ಕುಮಾರ್‌ ಪುತ್ತಿಲ ಹೇಳಿದ್ದಾರೆ.

ಪುತ್ತೂರಿನ ಜನತೆಗೆ ಬೇಕಿರುವುದು ಸತ್ಯ, ಪಾರದರ್ಶಕತೆ ಮತ್ತು ನ್ಯಾಯ. ಈ ಪ್ರಕರಣದ ಸಂಪೂರ್ಣ ಸತ್ಯ ಜನರ ಮುಂದೆ ಬರಲಿ. ಪುತ್ತೂರಿನ ರಾಜಕೀಯ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಸ್ಪಷ್ಟನೆ ನೀಡಲಿ ಹಾಗೂ ಅಗತ್ಯ ತನಿಖೆಗೆ ಸಹಕರಿಸಲಿ ಎಂದು ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.

Previous Post

ಖಾಸಗಿ ಬಸ್ಸುಗಳ ಮುಖಾಮುಖಿ ಢಿಕ್ಕಿ; 28 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ..!!

OtherNews

ಖಾಸಗಿ ಬಸ್ಸುಗಳ ಮುಖಾಮುಖಿ ಢಿಕ್ಕಿ; 28 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ..!!
ಕ್ರೈಮ್

ಖಾಸಗಿ ಬಸ್ಸುಗಳ ಮುಖಾಮುಖಿ ಢಿಕ್ಕಿ; 28 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ..!!

October 25, 2026
ಮಗುವಿನೊಂದಿಗೆ ಮಹಿಳೆ ನಾಪತ್ತೆ..!!
ಕ್ರೈಮ್

ಮಗುವಿನೊಂದಿಗೆ ಮಹಿಳೆ ನಾಪತ್ತೆ..!!

October 25, 2026
ಅಂಗವೈಕಲ್ಯದಿಂದ ಬಳಲುತ್ತಿದ್ದ ಮಗಳ ಹತ್ಯೆ; ಮನನೊಂದು ತಾಯಿ ಆತ್ಮಹತ್ಯೆ..!!
ಕ್ರೈಮ್

ಅಂಗವೈಕಲ್ಯದಿಂದ ಬಳಲುತ್ತಿದ್ದ ಮಗಳ ಹತ್ಯೆ; ಮನನೊಂದು ತಾಯಿ ಆತ್ಮಹತ್ಯೆ..!!

October 25, 2026
ಐಷಾರಾಮಿ ಜೀವನಕ್ಕಾಗಿ ಬೈಕ್ ಕಳವು : 7 ಮಂದಿ ವಶಕ್ಕೆ; ₹4.50 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳ ವಶ.!!
ಕ್ರೈಮ್

ಐಷಾರಾಮಿ ಜೀವನಕ್ಕಾಗಿ ಬೈಕ್ ಕಳವು : 7 ಮಂದಿ ವಶಕ್ಕೆ; ₹4.50 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳ ವಶ.!!

October 25, 2026
ಸ್ಟಿಂಗ್​ ಆಪರೇಷನ್​​ ಪ್ರಕರಣ: ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ..!
ಕ್ರೈಮ್

ಸ್ಟಿಂಗ್​ ಆಪರೇಷನ್​​ ಪ್ರಕರಣ: ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ..!

October 25, 2026
ಪುತ್ತೂರು: ಪಿಯುಸಿ ವಿದ್ಯಾರ್ಥಿ ನಾಪತ್ತೆ..!
ಕ್ರೈಮ್

ಪುತ್ತೂರು: ಪಿಯುಸಿ ವಿದ್ಯಾರ್ಥಿ ನಾಪತ್ತೆ..!

October 25, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರಿನ ಹೆಸರಿಗೆ ಕಳಂಕ ಬೇಡ, ಸತ್ಯ ಹೊರಬರಲಿ: ಟಿಕೆಟ್ ಹಂಚಿಕೆ ವಿವಾದದ ಸಮಗ್ರ ತನಿಖೆಗೆ ಅರುಣ್ ಕುಮಾರ್ ಪುತ್ತಿಲ ಆಗ್ರಹ..!!

October 25, 2026
ಖಾಸಗಿ ಬಸ್ಸುಗಳ ಮುಖಾಮುಖಿ ಢಿಕ್ಕಿ; 28 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ..!!

ಖಾಸಗಿ ಬಸ್ಸುಗಳ ಮುಖಾಮುಖಿ ಢಿಕ್ಕಿ; 28 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ..!!

October 25, 2026
ಮಗುವಿನೊಂದಿಗೆ ಮಹಿಳೆ ನಾಪತ್ತೆ..!!

ಮಗುವಿನೊಂದಿಗೆ ಮಹಿಳೆ ನಾಪತ್ತೆ..!!

October 25, 2026
ಅಂಗವೈಕಲ್ಯದಿಂದ ಬಳಲುತ್ತಿದ್ದ ಮಗಳ ಹತ್ಯೆ; ಮನನೊಂದು ತಾಯಿ ಆತ್ಮಹತ್ಯೆ..!!

ಅಂಗವೈಕಲ್ಯದಿಂದ ಬಳಲುತ್ತಿದ್ದ ಮಗಳ ಹತ್ಯೆ; ಮನನೊಂದು ತಾಯಿ ಆತ್ಮಹತ್ಯೆ..!!

October 25, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.