ವಿಟ್ಲ: ಬೆಂಗಳೂರು ನೋಂದಣಿಯ ಅಪರಿಚಿತ ಕಾರೊಂದು ಪತ್ತೆಯಾದ ಘಟನೆ ಅನಂತಾಡಿಯ ಕೊಬ್ರಿಮಠ ಎಂಬಲ್ಲಿ ನಡೆದಿದೆ.

ಕಾರು ಎರಡು ದಿನಗಳಿಂದ ಅದೇ ಸ್ಥಳದಲ್ಲಿ ನಿಂತಿದ್ದು, ಕಾರು ಹಾಳಾಗಿ ನಿಂತಿದಿಯೋ ಅಥವಾ ಕಳವು ಇನ್ನಿತರ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಕಾರೋ ಎಂದು ತನಿಖೆಯಿಂದ ತಿಳಿಯಬೇಕಿದೆ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.
ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.