ಬಂಟ್ವಾಳ: ನಗರ ಠಾಣಾ ವ್ಯಾಪ್ತಿಯಲ್ಲಿ 2021 ರಲ್ಲಿ ಫೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ಆದೇಶಿಸಿದೆ.
ವಿನ್ಸೆಂಟ್ ಪಿಂಟೋ ಎಂಬಾತನ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ರುಜುವಾತು ಆದ ಕಾರಣ ಆರೋಪಿಗೆ ಕಲಂ 8 ಫೋಕ್ಸೋ ಕಾಯ್ದೆಯಡಿ ಮೂರು ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 25000 ರೂ. ದಂಡ ಮತ್ತು ಕಲಂ 506 ಐಪಿಸಿಯಡಿ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.
ತನಿಖಾಧಿಕಾರಿಗಳಾದ ಚೆಲುವಾರಾಜ ಪಿ. ಐ ರವರು ಹೆಚ್ಚುವರಿ ಜಿಲ್ಲಾ ಸತ್ರಾ ನ್ಯಾಯಾಲಯ FTSC-II (POCSO) ದೋಷಾರೋಪ ಪಟ್ಟಿ ಸಲ್ಲಿಸಿದ್ದರು.