ಬೆಳ್ತಂಗಡಿ: ಠಾಣಾ ಪಿಎಸ್ ಐ ಮತ್ತು ಸಿಬ್ಬಂದಿಗಳು ರೌಂಡ್ಸ್ ನಲ್ಲಿದ್ದ ವೇಳೆ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಗೋ ಸಾಗಾಟ ಬೆಳಕಿಗೆ ಬಂದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಓರ್ವ ಆರೋಪಿ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಅಂತ್ರಾಯಪಲ್ಕೆ ಎಂಬಲ್ಲಿ ನಡೆದಿದೆ.
ಆರೋಪಿಗಳಾದ ರಜಾಕ್, ಮಹಮ್ಮದ್ ರಫೀಕ್, ನಾಗೇಶ್ ಶೆಟ್ಟಿ ರನ್ನು ಬಂಧಿಸಲಾಗಿದ್ದು, ರವೂಫ್(ಮಹಮ್ಮದ್ ಆಸೀಫ್) ಪರಾರಿಯಾದಾತ.
ಆ.18 ರಂದು ರಾತ್ರಿ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್ ಐ ನಂದಕುಮಾರ್ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಅಂತ್ರಾಯಪಲ್ಕೆ ಎಂಬಲ್ಲಿ ಕಾರುಗಳನ್ನು ತಡೆದು ನಿಲ್ಲಿಸುವಂತೆ ಸೂಚಿಸಿದಾಗ ಮಾರುತಿ ಕಾರಿನಲ್ಲಿದ್ದ ಚಾಲಕನು ಕಾರನ್ನು ಬಿಟ್ಟು ಪರಾರಿಯಾಗಿದ್ದು, ನಂತರ ಕಾರುಗಳನ್ನು ಪರಿಶೀಲಿಸಿದಾಗ ಕ್ವಾಲಿಸ್ ಕಾರಿನಲ್ಲಿ ಎರಡು ಹಸು ಮತ್ತು ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಕೈ ಕಾಲು ಕಟ್ಟಿ ತುಂಬಿಸಿರುವುದು ಕಂಡು ಬಂದಿರುತ್ತದೆ.
ಈ ಹಿನ್ನೆಲೆ ಕಾರಿನಲ್ಲಿದ್ದ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಓರ್ವ ಆರೋಪಿ ಓಡಿ ಪರಾರಿಯಾಗಿದ್ದು, ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಸ್ವಾಧೀನ ಪಡಿಸಿಕೊಂಡ ಜಾನುವಾರುಗಳ ಅಂದಾಜು ಮೌಲ್ಯ ರೂ.55,000/- ಆಗಿದ್ದು, ಎರಡು ವಾಹನಗಳ ಒಟ್ಟು ಮೊತ್ತ ರೂ.3,60,000/- ಆಗಿರುತ್ತದೆ. ಒಟ್ಟು ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಮೌಲ್ಯ 4,15,000/- ಆಗಿರುತ್ತದೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ 54/2022 ಕಲಂ: 4,5,7,8,12 ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಆದ್ಯಾದೇಶ ನಿಯಮ 2020 & ಕಲಂ: 53(1) r/w 192 ಐಎಂವಿ ಆಕ್ಟ್ ನಡಿ ಪ್ರಕರಣ ದಾಖಲಾಗಿದೆ.