ಬಂಟ್ವಾಳ: ಪ್ರತೀ ವರ್ಷದಂತೆ ಈ ವರ್ಷವೂ ಐತಿಹಾಸಿಕ ಧಾರ್ಮಿಕ ಹಿನ್ನಲೆಯಿರುವ ಸುಳ್ಳಮಲೆ ಗುಹಾ ತೀರ್ಥ ಸ್ನಾನ ಆ.27 ರಿಂದ 31 ಬಾದ್ರಪದ ಶುಕ್ಲ ಚೌತಿ ವರೆಗೆ ಜರುಗಲಿದೆ.

ಸೋಣ ಅಮವಾಸ್ಯೆಯಂದು ಬಿದಿರಿನ ಕೇರ್ಪು ( ಏಣಿ) ಇಡುವ ಸಂಪ್ರದಾಯದ ಬಳಿಕ ಅರಸು ಶ್ರೀ ಗುಡ್ಡೆಚಾಮುಂಡಿ ಮತ್ತು ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ಮೊದಲಾದ ಧಾರ್ಮಿಕ ವಿಧಿ ವಿಧಾನದ ಬಳಿಕ ಭಕ್ತಾದಿಗಳಿಗೆ ತೀರ್ಥ ಸ್ನಾನಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ.

ಭಕ್ತಾಧಿಗಳು ತೀರ್ಥ ಸ್ನಾನಕ್ಕೆ ಬರುವಾಗ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಬರುವ ಮೂಲಕ ತೀರ್ಥಕ್ಷೇತ್ರದ ಪಾವಿತ್ರ್ಯವನ್ನು ಗೌರವಿಸಬೇಕೆಂದು ಮಾಣಿಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























