ವಿಟ್ಲ: ಕಾರು ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಉಕ್ಕುಡ ಬುಳೇರಿಕಟ್ಟೆ ರಸ್ತೆಯ ನೀರ್ಕಜೆಯಲ್ಲಿ ನಡೆದಿದೆ.

ಪಿಕಪ್ ವಾಹನ ಚಾಲಕ ಹಠಾತ್ ಬ್ರೇಕ್ ಹಾಕಿದ ಹಿನ್ನೆಲೆ ಹಿಂಬದಿಯಲ್ಲಿದ್ದ ಕಾರು ನಿಯಂತ್ರಣ ಸಿಗದೆ ಪಿಕಪ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಿಂದಾಗಿ ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

























