ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯದ ವತಿಯಿಂದ ಯುನಿಸೆಫ್ ಮತ್ತು ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಪ್ರಸ್ತುತ ಪಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಡಿಯಲ್ಲಿ ಬಲ್ನಾಡು ಉಜ್ರುಪಾದೆ ಅಂಗನವಾಡಿ ಕೇಂದ್ರದಲ್ಲಿ ಮಾನಸಿಕ ಆರೋಗ್ಯದ ಕುರಿತು ಮಾಹಿತಿ ಕಾರ್ಯಕ್ರಮ ಆ.20 ರಂದು ನಡೆಯಿತು.

ಮಾನಸಿಕ ಆರೋಗ್ಯ ಸಲಹಾ ತಜ್ಞರಾದ ನಾಗಶ್ರೀ ಐತಾಳ್ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ಮಾನಸಿಕ ಆರೋಗ್ಯದ ಕುರಿತು ಸಲಹೆಗಳನ್ನು ನೀಡಿದರು.

ಈ ಸಂದರ್ಭ ರೇಡಿಯೋ ಪಾಂಚಜನ್ಯದ ಕಾರ್ಯದರ್ಶಿ ಪದ್ಮಾ ಕೆ.ಆರ್. ಆಚಾರ್ಯ ಮತ್ತು ಸಂಯೋಜಕಿ ತೇಜಸ್ವಿ ರಾಜೇಶ್ ಉಪಸ್ಥಿತರಿದ್ದರು. ಉಜ್ರುಪಾದೆ ಅಂಗನವಾಡಿ ಕೇಂದ್ರದ ಶಿಕ್ಷಕಿ ಲೀಲಾವತಿ ಸಹಕರಿಸಿದರು.
































