ಪುತ್ತೂರು: ನಗರ ಹೊರವಲಯ ನೆಹರು ನಗರದ ಶಿವನಗರ ಎಂಬಲ್ಲಿ ಕಳೆದ 5 ವರ್ಷಗಳಿಂದ ನೃತ್ಯ,ಸಂಗೀತ, ಭಜನೆ, ಲಘು ಸಿನೆಮಾ ನಿರ್ಮಾಣ ಕಲಾ ಚಟುವಟಿಕೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಶಿವಮಣಿ ಕಲಾ ಸಂಘ (ರಿ) ಇದರ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಥಮ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಲಿಂಗನಗುಡ್ಡೆ ಶ್ರೀ ಸೋಮಲಿಂಗೇಶ್ವರ ಮಂದಿರದ ವಠಾರದಲ್ಲಿ ಆ.28 ರಂದು ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮಲಿಂಗೇಶ್ವರ ಮಂದಿರದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಸ್ಥಳೀಯ ನಗರಸಭಾ ಸದಸ್ಯರಾದ ಶಿವರಾಮ ಸಪಲ್ಯ ದೀಪ ಬೆಳಗಿಸಿ ಶುಭ ಹಾರೈಕೆಗಳೊಂದಿಗೆ ಚಾಲನೆ ನೀಡಿದರು.
ಅರುಣಾ ಆಚಾರ್ಯ ಪ್ರಾರ್ಥನೆ ಹಾಡಿದರು. ಶ್ರೀಮಾನ್ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಸುದರ್ಶನ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಪಟ್ಲ ಸ್ಪೋರ್ಟ್ಸ್ ನೆಹರು ನಗರ ಮಾಲಕರಾದ ಧನಂಜಯ್ ಪಟ್ಲ ರವರು ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಜೀವ ಸಪಲ್ಯ, ಚಂದ್ರಾವತಿ ಶೇವಿರೆ ಹಾಗೂ ದೇವಸ್ಥಾನದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಹಾಗೂ ಶಿವಮಣಿ ಸಾಂಸ್ಕೃತಿಕ ಕಲಾಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಆರು ತಿಂಗಳ ಶಿಶು ವಯೋಮಾನದಿಂದ 5 ವರ್ಷದ ವರೆಗಿನ ಮಕ್ಕಳ ಕೃಷ್ಣ ವೇಷ ಸ್ಪರ್ಧೆ ಹಾಗೂ ವಿವಿಧ ಕೃಷ್ಣ ವೇಷ ಪ್ರದರ್ಶನ ನಡೆಯಿತು. ಒಟ್ಟು 24 ಕಂದಮ್ಮಗಳು ಕೃಷ್ಣ ವೇಷ ಸ್ಪರ್ದೆಯಲ್ಲಿ ಪಾಲ್ಗೊಂಡಿದ್ದರು. ಆಟೋಟ ಸ್ಪರ್ದೆಯಲ್ಲಿ ಪುಟ್ಟ ಮಕ್ಕಳಿಗೆ ಬಾಲ್ ಪಾಸಿಂಗ್, ಬಕೆಟ್ಟಿಗೆ ಬಾಲ್ ಎಸೆತ, ಬಾಲಕ,ಬಾಲಕಿಯರಿಗೆ ಸಂಗೀತ ಕುರ್ಚಿ,ವಯಸ್ಕ ಮಹಿಳೆ ಯರಿಗೆ ನಿಂಬೆ ಚಮಚ ಓಟ, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಆಟ, ಪುರುಷರಿಗೆ ಹಗ್ಗ ಜಗ್ಗಾಟ,ಸಂಗೀತ ಕುರ್ಚಿ ಸ್ಪರ್ದೆ ಏರ್ಪಡಿಸಲಾಯಿತು.
ಮದ್ಯಾಹ್ನ ಸಿಂಪಲ್ ಮೆಲೊಡಿಸ್ ತಂಡ ಪಡ್ಡಾಯೂರು ಬಳಗದ ಆಹ್ವಾನಿತ ಕಲಾವಿದರಿಂದ ಸುಗಮ ಸಂಗೀತ, ಭಕ್ತಿ ಗೀತೆ, ನೃತ್ಯಗೀತೆ ರಸಮಂಜರಿ ನಡೆಯಿತು. ದಾನಿಗಳ ಸಹಕಾರದಲ್ಲಿ ಮದ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ 300 ಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ಸಂಜೆ ಗಂಟೆ 4 ರಿಂದ ನಡೆದ ಸಭಾ ಕಾರ್ಯಕ್ರಮ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ,ಅಟೋಟ ಸ್ಪರ್ದೆಗಳ ಬಹುಮಾನ ವಿತರಣೆಯಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ನಗರಸಭೆ ಅದ್ಯಕ್ಷ ಜೀವಂಧರ್ ಜೈನ್ ಅನುಪಸ್ಥಿತಿಯಲ್ಲಿ ಸ್ಥಳೀಯ ಕೌನ್ಸಿಲರ್ ಶಿವರಾಮ ಸಪಲ್ಯ ಅಲಂಕರಿಸಿದರು.
ಮುಖ್ಯ ಅತಿಥಿಗಳಾಗಿ ಅಶೋಕ್ ಕುಮಾರ್ ರೈ ಅರ್ಪಿಣಿ ಗುತ್ತು, ಸಹಜ್ ರೈ ಬಳಜ್ಜ, ಜಿ. ಜಗದೀಶ್ ನಾಯಕ್ ಉಪ್ಪಿನಂಗಡಿ, ಪುತ್ತೂರು ತಾಲೂಕು ಕ್ರೀಡಾಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ ನಾಯಕ್, ಕೆ.ಬಿ. ಜನಾರ್ಧನ್ ಗೌಡ, ಶಿವರಾಮ ಸಪಲ್ಯ ಮತ್ತು ಶಿವಮಣಿ ಕಲಾ ಸಂಘದ ಅಧ್ಯಕ್ಷರಾದ ದೀಪಕ್ ಪೈ ಉಪ್ಪಿನಂಗಡಿ ಹಾಗೂ ಸಾಂಸ್ಕೃತಿಕ ಸಲಹಾ ಸಮಿತಿಯ ಅಧ್ಯಕ್ಷರಾದ ಸಂತೋಷ್ ಜೆ.ಪಿ. ಮುರ ಉಪಸ್ಥಿತರಿದ್ದರು.
ಸಂಚಾಲಕರಾದ ಮನುಕುಮಾರ್ ಶಿವನಗರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭಾ ಕಾರ್ಯಕ್ರಮದಲ್ಲಿ ಕಲಾವಿದರು ಮತ್ತು ಕಲಾ ಪೋಷಕ 17 ಸಾಧಕರಿಗೆ ಬಿರುದು, ಪ್ರಶಸ್ತಿ ಹಾಗೂ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಉಪ್ಪಿನಂಗಡಿ ಗಂಗಾಧರ್ ಟೈಲರ್ ಕೋಟೆ ಇವರಿಗೆ ಕಲಾ ಕೌಸ್ತುಭ, ರಾಜಶೇಖರ್ ಶಾಂತಿನಗರ ಇವರಿಗೆ ಹಾಸ್ಯ ಸಿಂಧೂರ , ಅಶೋಕ್ ಬನ್ನೂರು ರವರಿಗೆ ಕಲಾ ಚತುರ, ದೀಪಕ್ ಯು. ಪೈ ಯವರಿಗೆ ಸವ್ಯಸಾಚಿ, ಪುತ್ತೂರು ತಾಲೂಕು ಕ್ರೀಡಾಧಿಕಾರಿ ಶ್ರೀಕಾಂತ್ ಬಿರಾವು ವರಿಗೆ ಪ್ರತಿಭಾ ರತ್ನ ಬಿರುದು , ಶಿವಮಣಿ ಕಲಾ ಸಂಘದ ನವೀನ್ ಸೀಟಿ ಗುಡ್ಡೆ ಇವರಿಗೆ ಸೌಖ್ಯ ಸಂಧಾನಕಾರ ಬಿರುದು , ಸುದರ್ಶನ್ ಪುತ್ತೂರು, ಕಲಾವಿಧ ಕೃಷ್ಣಪ್ಪ ಶಿವನಗರ ಸಂತೋಷ್ ಜೆ.ಪಿ. ಮುರ, ಶ್ರಿಧರ್ ಯು.ಕೆ. ಕುಂಜಾರು, ಅನ್ನಪೂರ್ಣಾ ಟೀಚರ್, ಅರುಣಾ ಆಚಾರ್ಯ, ನಿರ್ಮಲಾ ದೇವಾಡಿಗ, ನಳಿನಿ ಪಡ್ಡಾಯೂರು ಗಳವರಿಗೆ ಸೇವಾ ರತ್ನ ಪ್ರಶಸ್ತಿ,
ಬಾಲ ಕಲಾವಿಧರಾದ ನಿಹಾರಿಕಾ ಕಾಟುಕುಕ್ಕೆ,ಮೋನಿಕ ಬಿ.ವಿ. ಹಾಗೂ ಮನಸ್ವೀ ಪಿ. ಇವರಿಗೆ ಸ್ಟಾರ್ ಅಪ್ ದಿ ಶಿವಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಚಾಲಕ ಮನುಕುಮಾರ್ ರವರಿಗೆ ಸಂಘಟನಾ ಸಾರಥಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಹಲವರಿಗೆ ಸ್ಮರಣಿಕೆಗಳನ್ನು ನೀಡಲಾಯಿತು.
ಸಭಾಕಾರ್ಯಕ್ರಮದ ಅತಿಥಿ ಶ್ರೀಯುತ ಅಶೋಕ್ ಕುಮಾರ್ ರೈ ಅರ್ಪಿಣಿ ಗುತ್ತು, ಸಹಜ್ ರೈ ಬಳಜ್ಜ, ಜಿ. ಜಗದೀಶ್ ನಾಯಕ್ ಉಪ್ಪಿನಂಗಡಿ, ಪುತ್ತೂರು ತಾಲೂಕು ಶ್ರೀಕಾಂತ್ ಪೂಜಾರಿ ಯು. ಬಿರಾವು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ ನಾಯಕ್, ಕೆ.ಬಿ. ಜನಾರ್ಧನ್ ಗೌಡ ಶಿವಮಣಿ ಕಲಾಸಂಘದ ಚಟುವಟಿಕೆ ಹಾಗೂ ಯಶಸ್ವಿ ಕಾರ್ಯಕ್ರಮವನ್ನು ಮನತುಂಬಿ ಕೊಂಡಾಡಿದರು.
ಐದು ವರ್ಷಗಳ ಹಿಂದೆ ಯುವ ಕಣ್ಮಣಿ ಮನು ಕುಮಾರ್ ಸಾರಥ್ಯದಲ್ಲಿ ಬೆರಳೆಣಿಕೆಯ ಯುವಕರೊಂದಿಗೆ ಆರಂಭಗೊಂಡ ಶಿವಮಣಿ ಕಲಾ ತಂಡ 5 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಂಡವನ್ನು ಹಿರಿಯ ಸುದರ್ಶನ್ ಪುತ್ತೂರು ರವರ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಶಿವಮಣಿ ಕಲಾ ಸಂಘ ಎಂದು ಮರುನಾಮಕರಣಗೊಂಡು ಸರಕಾರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಾವಣೆ ಮಾಡಲಾಗಿತ್ತು. ಅನ್ನಪೂರ್ಣ ಧನ್ಯವಾದ ಸಮರ್ಪಿಸಿದರು. ವಿನೋದ್ ಪಿ. ಕಲ್ಲೇಗ ಕಾರ್ಯಕ್ರಮದ ನಿರೂಪಣೆಗೈದರು.