ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ, ಜನಸಂಘದ ಕಾರ್ಯಕರ್ತ ಪಕೀರ ಮಣಿಯನಿ ಸಾರಡ್ಕ(85) ರವರು ಅನಾರೋಗ್ಯದಿಂದಾಗಿ ಸೆ.3 ರಂದು ರಾತ್ರಿ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಪಕೀರ ರವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಹೋರಾಟ ಸಮಿತಿಯಲ್ಲಿದ್ದ ಅವರು ಅದರಲ್ಲಿ ಜೈಲು ವಾಸ ಕೂಡ ಅನುಭವಿಸಿದ್ದರು. ಅದೇ ರೀತಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಜೈಲು ವಾಸ ಅನುಭವಿಸಿದ್ದರು. ಸಾಮಾಜಿಕ ಧಾರ್ಮಿಕ ಮುಂದಾಳು ಆಗಿದ್ದರು.
ಮೃತರು ಪತ್ನಿ ಮತ್ತು ನಾಲ್ವರು ಪುತ್ರರನ್ನು ಅಗಲಿದ್ದಾರೆ.