ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನ ನಿರ್ವಾಹಕನೋರ್ವ ಪ್ರಯಾಣಿಕನ ಎದೆಗೆ ಕಾಲಿನಿಂದ ತುಳಿದು ರಸ್ತೆಗೆ ದೂಡಿ ಹಾಕಿದ ಕೃತ್ಯವೊಂದು ಈಶ್ವರಮಂಗಲದಲ್ಲಿ ನಡೆದಿದ್ದು, ಘಟನೆಯ ವೀಡಿಯೊ ವೈರಲ್ ಆಗಿದೆ.
ಈಶ್ವರಮಂಗಲ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಮೇಲ್ನೋಟಕ್ಕೆ ಪ್ರಯಾಣಿಕನು ಪಾನಮತ್ತನಂತೆ ಕಂಡು ಬರುತ್ತಿದ್ದು, ಕೆ.ಎಸ್.ಆರ್.ಟಿ. ಸಿ ಬಸ್ ನಿರ್ವಾಹಕ ಪ್ರಯಾಣಿಕನನ್ನು ತುಳಿದು ಹೊರಹಾಕಿದ್ದಾನೆ.
ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಬಸ್ ಗೆ ಹತ್ತುವಾಗಲೇ ನಿರ್ವಾಹಕ ಆತನನ್ನು ತಡೆಯುತ್ತಾನೆ. ಆತನ ಕೊಡೆಯನ್ನು ರಸ್ತೆ ಎಸೆಯುತ್ತಾನೆ. ಆದರೇ ಆತ ಬಸ್ಸಿನಿಂದ ಕೆಳಗೆ ಇಳಿಯದೆ ಇದ್ದು, ನಿರ್ವಾಹಕನಿಗೆ ಕೂಡ ಬೈದಿದ್ದು, ಅಷ್ಟೇ ಅಲ್ಲದೆ ಪ್ರಯಾಣಿಕರಿಗೆ ಕೂಡ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ನಂತರ ಆತನ ಮೇಲೆ ನಿರ್ವಾಹಕನಿಗೆ ಕೈಯಿಂದ ಹಲ್ಲೆ ನಡೆಸಿದ್ದಾನೆ, ಇದರಿಂದ ನಿರ್ವಾಹಕ ಕೊನೆಗೆ ಕಾಲಿನಿಂದ ಪ್ರಯಾಣಿಕನ ಎದೆಗೆ ತುಳಿದು ರಸ್ತೆಗೆ ದೂಡಿ ಹಾಕಿ, ಆತನಿಗೆ ಜೋರು ಮಾಡುವ ದೃಶ್ಯ ಸೆರೆಯಾಗಿದೆ.
ರಸ್ತೆಗೆ ಬಿದ್ದ ವ್ಯಕ್ತಿಯನ್ನು ಅಲ್ಲಿಯೇ ಬಿಟ್ಟು ನೇರವಾಗಿ ಬಸ್ ಚಲಾಯಿಸಿಕೊಂಡು ಹೋಗಲಾಗಿದ್ದು, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ರಸ್ತೆಯಲ್ಲೇ ಮಲಗಿಕೊಂಡಿರುತ್ತಾನೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಪ್ರಕರಣದ ಸತ್ಯಾಅಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ..
ಸ್ಥಳೀಯರ ಮಾಹಿತಿ ಪ್ರಕಾರ, ಈತ ದಿನವಿಡೀ ಕುಡಿದು ಅಲ್ಲಿ ಇಲ್ಲಿ ರಾದ್ದಾಂತ ಸೃಷ್ಟಿಸುತ್ತಾನೆ ಎಂದು ತಿಳಿದು ಬಂದಿದೆ. ಆತನಿಗೆ ದಿನವಿಡೀ ಕುಡಿದು ಬೇರೆಯವರಿಗೆ ತೊಂದರೆ ನೀಡುವುದೆ ಕೆಲಸವೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಪಾನಮತ್ತ ವ್ಯಕ್ತಿಯಿಂದ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಬಾರದೆಂಬ ಕಾಳಜಿಯಿಂದ ಬಸ್ ನಿರ್ವಾಹಕ ಆತನನ್ನು ಹೊರ ಹೋಗಲು ಹೇಳಿದ್ದು, ಆದರೇ ಎಷ್ಟು ಹೇಳಿದರು ಆತ ಬಸ್ಸಿನಿಂದ ಹೊರ ಹೋಗದೇ ರಂಪಾಟ ಮಾಡಿದ ಹಿನ್ನೆಲೆ ನಿರ್ವಾಹಕ ಹೊರ ದಬ್ಬಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ..
ವೈರಲ್ ಆಗುತ್ತಿರುವ ವೀಡಿಯೊ.. 👇👇