ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಜೆಸಿಐ ನ ರಾಷ್ಟ್ರೀಯ ಅಧ್ಯಕ್ಷರಾದ ಅಂಷು ಶರಫ್ ರವರು ಆಗಮಿಸಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸತತವಾಗಿ 100% ಗುಣಮಟ್ಟದ ಫಲಿತಾಂಶ ದಾಖಲಿಸಿರುವುದು ಸ್ಪೂರ್ತಿದಾಯಕ ಎಂದು ಶ್ಲಾಘಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಎಲ್.ಎನ್ ಕೂಡೂರು ರವರು ಮಾತನಾಡುತ್ತಾ “ಭಾರತೀಯ ಚಿಂತನೆಗಳನ್ನು ಗಮನದಲ್ಲಿಟ್ಟು, ಸಂಸ್ಕಾರದ ಶಿಕ್ಷಣವನ್ನು ಕೊಡುವಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ನಮ್ಮ ಸಂಸ್ಥೆ ಪ್ರಯತ್ನಿಸುತ್ತಿದೆ. ಇದಕ್ಕೆ ನಮ್ಮ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಹೆತ್ತವರು ಕಾರಣರಾಗಿದ್ದಾರೆ” ಎಂದು ತಿಳಿಸಿದರು.

ಶಾಲಾ ಪ್ರಾಂಶುಪಾಲರಾದ ಜಯರಾಮ್ ರೈ ರವರು ಸಂಸ್ಥೆಯು ಬೆಳೆದು ಬಂದ ಹಾದಿ ಹಾಗೂ ಶೈಕ್ಷಣಿಕ ರಂಗದಲ್ಲಿ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾಧನೆಯನ್ನು ಪ್ರಸ್ತುತಪಡಿಸಿದರು.
ಜೇಸೀಸ್ ಸಂಸ್ಥೆಯ ವತಿಯಿಂದ ಶಾಲೆಗೆ ಕಪಾಟು ಕೊಡುಗೆಯಾಗಿ ನೀಡಲಾಯಿತು.

ವೇದಿಕೆಯಲ್ಲಿ ಜೇಸೀಸ್ ವಲಯ ಅಧ್ಯಕ್ಷರಾದ ರಾಯನ್ ಕ್ರಾಸ್ತಾ, ಜೇಸೀಸ್ ಪುರುಷೋತ್ತಮ, ಜೇಸೀಸ್ ವಿಟ್ಲ ಅಧ್ಯಕ್ಷರಾದ ಚಂದ್ರಹಾಸ ಕೊಪ್ಪಳ, ಜೇಸೀಸ್ ವಿಟ್ಲ ಘಟಕದ ಪದಾಧಿಕಾರಿಗಳು, ಜೇಸಿ ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಸಹ ಶಿಕ್ಷಕಿ ತೇಜಸ್ವಿನಿ ಪ್ರಾರ್ಥಿಸಿದರು ಹಾಗೂ ಸಹ ಶಿಕ್ಷಕಿ ಲಾವಣ್ಯ ಭಟ್ ನಿರೂಪಣೆ ಮಾಡಿದರು.

