ಮುಳಿಯ ಜ್ಯುವೆಲ್ಸ್ ವತಿಯಿಂದ ಮಂಗಳೂರಿನ ಓಶಿಯನ್ ಪರ್ಲ್ ನಲ್ಲಿ ಚಿನ್ನ – ವಜ್ರಾಭರಣಗಳ ಎಕ್ಸಿಬಿಷನ್ ಉದ್ಘಾಟನೆಗೊಂಡಿತು.
ಈ ಪ್ರದರ್ಶನ ಮತ್ತು ಮಾರಾಟ ಸೆಪ್ಟೆಂಬರ್ 8 ರಿಂದ 11 ರವರೆಗೆ ಇರಲಿದೆ. ದಕ್ಷಿಣ ಕನ್ನಡದ 9 ಯಶಸ್ವಿ ಮಹಿಳೆಯರಾದ ಡಾ. ಆಶಾಜ್ಯೋತಿ ರೈ – ಅಧ್ಯಕ್ಷರು ಆಸರೆ ಚಾರಿಟೇಬಲ್ ಟ್ರಸ್ಟ್, ಶ್ರೀಮತಿ ದೀಪ ಕಾಮತ್- ಸಿ ಇ ಒ ಫೀಲ್ಡ್ ಸ್ಟಾರ್ ಪ್ರೈವೇಟ್ ಲಿಮಿಟೆಡ್, ಶ್ರೀಮತಿ ಮಮತ – ಹೆಡ್ ಹೆಚ್ ಆರ್ ಬಿಗ್ ಬ್ಯಾಗ್ಸ್ ಇಂಡಿಯ ಪ್ರೈವೇಟ್ ಲಿಮಿಟೆಡ್, ಶ್ರೀಮತಿ ಕೋಮಲ ಪ್ರಭು – ಸಿ ಇ ಒ ಮಹರಾಜ ಗ್ರೂಪ್, ಡಾ. ಮಾಲಿನಿ ಹೆಬ್ಬಾರ್- ಪ್ರಿನ್ಸಿಪಾಲ್ ಸ್ವಸ್ತಿಕಾ ನ್ಯಾಶನಲ್ ಸ್ಕೂಲ್, ಶ್ರೀಮತಿ ಚೇತನಾ – ಚೇತನಾಸ್ ಬ್ಯೂಟಿ ಲಾಂಚ್, ಶ್ರೀಮತಿ ಸುಮನಾ ಪೊಳಲಿ – ಟೆಕ್ನಿಕಲ್ ಡೆವಲಪ್‌ಮೆಂಟ್ ಮ್ಯಾನೇಜರ್ ಐವರಿ ಇಂಡಿಯ ಪ್ರೈವೇಟ್ ಲಿಮಿಟೆಡ್, ಶ್ರೀಮತಿ ಪ್ರಜ್ಞಾ ಡಿ ಎಸ್ – ಪ್ಯಾಶನ್ ಡಿಸೈನರ್, ವಿದೂಷಿ ಸುಭಮಣಿ ಚಂದರಶೇಕರ್ ಇವರಿಂದ ಹಲವಾರು ವಿನೂತನ ಶೈಲಿಯ ಚಿನ್ನ – ವಜ್ರಾಭರಣಗಳನ್ನು ಅನಾವರಣ ಗೊಳಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಆಶಾಜ್ಯೋತಿ ರೈ “ಇಲ್ಲಿನ ಪ್ರತಿಯೊಂದು ಡಿಸೈನ್‌ಗಳೂ ಯೂನಿಕ್ ಆಗಿವೆ” ಎಂದರು. ಮುಖ್ಯ ಅತಿಥಿಗಳಾದ ಡಾ. ಮಾಲಿನಿ ಹೆಬ್ಬಾರ್ “ಮಹಿಳೆಯರು ಜವಾಬ್ದಾರಿಯುಳ್ಳವರು, ಉಳಿತಾಯ ಮತ್ತು ಧರಿಸಲು ಚಿನ್ನದ ಹೂಡಿಕೆ ಅಗತ್ಯ, ನನಗೆ ಈ ಅನುಭವ ಇದೆ” ಎಂದರು.
ಅಧ್ಯಕ್ಷ ಸ್ಥಾನದಲ್ಲಿ ಮಾತನಾಡಿದ ಕೇಶವ ಪ್ರಸಾದ ಮುಳಿಯ ಈ ಎಕ್ಸಿಬಿಷನಲ್ಲಿ ಕಿಸ್ನ ಡೈಮಂಡ್‌ನ ವಿಶೇಷ ಆಭರಣಗಳು ಸೇರಿಕೊಂಡಿವೆ ಎಂದರು.
ಮ್ಯಾನೆಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ ಪ್ರಸ್ತಾವನೆ ಮಾಡಿದರು. ಇಷಾ ಮುಳಿಯ ಸ್ವಾಗತ ಮಾಡಿದರು, ಶ್ರೀಮತಿ ಭವ್ಯ ಕಾರ್ಯಕ್ರಮ ನಿರೂಪಿಸಿದರು, ನಾಮದೇವ ಮಲ್ಯ, ಸಂಜೀವ ಹಾಗೂ ಕಿಸ್ನ ಡೈಮಂಡ್ ಚಾನಲ್‌ನ ಪಾರ್ಟ್ನರ್ ಪ್ರಕಾಶ್ ಸಿಂಥ್ರೆ ಉಪಸ್ಥಿತರಿದ್ದರು.
ವಂದನಾರ್ಪಣೆಯಲ್ಲಿ ಮಾತನಾಡಿದ ಸಲಹೆಗಾರ ವೇಣು ಶರ್ಮ “ನಾಳೆ ಸಂಜೆ (ಶುಕ್ರವಾರ 09-೦9-2022) ವಿನೂತನ ಶೈಲಿಯ ಚಿನ್ನಾ – ವಜ್ರಾಭರಣಗಳ ಫ್ಯಾಶನ್ ಶೋ ನಡೆಯಲಿದೆ ಎಂದರು