ವಿಟ್ಲ: ಮಳೆಯಿಂದಾಗಿ ರಸ್ತೆ ಅಪಾಯದಂಚಿಗೆ ಸಿಲುಕಿದ ಘಟನೆ ವಿಟ್ಲ ಕಾಶಿಮಠದಲ್ಲಿ ನಡೆದಿದೆ.

ಕಾಶಿಮಠದ ರಸ್ತೆ ಮಳೆಗೆ ಕುಸಿದಿದ್ದು, ಜಠಾಧಾರಿ-ಕೋಟಿಕೆರೆ ಸಂಪರ್ಕದ ರಸ್ತೆ ಇದಾಗಿದೆ.

ರಸ್ತೆ ಒಂದು ಭಾಗ ಕುಸಿದಿದ್ದು, ಇದೇ ರೀತಿ ಮಳೆ ಸುರಿದರೆ ರಸ್ತೆ ಸಂಪೂರ್ಣ ಕುಸಿದು ಬೀಳಲಿದೆ. ಈ ಭಾಗದಲ್ಲಿ ಅನೇಕ ಮನೆಗಳಿದ್ದು, ರಸ್ತೆ ಕುಸಿದರೆ ಹಲವು ಕುಟುಂಬಗಳಿಗೆ ತೊಂದರೆಯಾಗಲಿದೆ.

